News Kannada
Saturday, March 02 2024
ದೇಶ

ಒಂಟಿ ಪುರುಷ, ಮಹಿಳಾ ಸರ್ಕಾರಿ ನೌಕರರು 730 ದಿನಗಳ ಮಕ್ಕಳ ಆರೈಕೆ ರಜೆಗೆ ಅರ್ಹರು: ಕೇಂದ್ರ

government employees
Photo Credit : News Kannada

ನವದೆಹಲಿ: ಮಹಿಳಾ ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು ತಮ್ಮ ಪೂರ್ಣ ಸೇವೆಯ ಅವಧಿಯಲ್ಲಿ 730 ದಿನಗಳು ಮಕ್ಕಳ ಆರೈಕೆ ರಜೆಯನ್ನು ಪಡೆದುಕೊಳ್ಳಬಹುದು. ಇದಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಹೇಳಿದ್ದಾರೆ.

“ಕೇಂದ್ರೀಯ ನಾಗರಿಕ ಸೇವೆಗಳ ನಿಯಮಗಳು, 1972ರ ನಿಯಮ 43-ಸಿ ಅಡಿಯಲ್ಲಿ ಸಿವಿಲ್ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಮಹಿಳಾ ಸರ್ಕಾರಿ ನೌಕರರು ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು ಮಕ್ಕಳ ಆರೈಕೆ ರಜೆಗೆ (CCL) ಅರ್ಹರಾಗಿರುತ್ತಾರೆ. ಈ ಸರ್ಕಾರಿ ನೌಕರರು, ತಮ್ಮ ಪೂರ್ಣ ಸೇವೆಯ ಅವಧಿಯಲ್ಲಿ 730 ದಿನಗಳ ಕಾಲ ಮಕ್ಕಳನ್ನು ಆರೈಕೆ ಮಾಡಲು ರಜೆ ತೆಗೆದುಕೊಳ್ಳಬಹುದು” ಎಂದು ಹೇಳಿದರು.

ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು 18 ವರ್ಷ ವಯಸ್ಸಿನವರೆಗೆ ನೋಡಿಕೊಳ್ಳಲು ರಜೆಯನ್ನು ಪಡೆಯಬಹುದು ಮತ್ತು ಅಂಗವಿಕಲ ಮಕ್ಕಳ ವಿಷಯದಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಲಿಖಿತ ರೂಪದಲ್ಲಿ ಜಿತೇಂದ್ರ ಸಿಂಗ್ ಸಂಸತ್ತಿಗೆ ತಿಳಿಸಿದ್ದಾರೆ,

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು