News Kannada
Saturday, March 02 2024
ಗೋವಾ

ಗೋವಾದಲ್ಲಿ ಶೇಕಡಾ 30ರಷ್ಟು ಮಹಿಳೆಯರಿಗೆ ಉದ್ಯೋಗ ಮೀಸಲು ಭರವಸೆ: ಪ್ರಿಯಾಂಕಾ ಗಾಂಧಿ

K'taka Cong gears up for Priyanka's B'luru convention
Photo Credit :

ಪಣಜಿ (ಪಿಟಿಐ) : ಗೋವಾದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಗಾಗಿ ₹500 ಕೋಟಿ ಒದಗಿಸಲಾಗುವುದು ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 30ರಷ್ಟನ್ನು ಮಹಿಳೆಯರಿಗೆ ಮೀಸಲು ಇರಿಸಲಾಗುವುದು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭರವಸೆ ಕೊಟ್ಟಿದ್ದಾರೆ. ಗೋವಾದ ನ್ಯುವೆಮ್‌ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಿಯಾಂಕಾ ಅವರು ಮಾತನಾಡಿದರು.

ಸರ್ಕಾರಿ ಉದ್ಯೋಗದ ನೇಮಕಾತಿಯ ಹಗರಣಗಳನ್ನು ತಡೆಯಲು ಸಿಬ್ಬಂದಿ ಆಯ್ಕೆ ಆಯೋಗವನ್ನು ರಚಿಸಲಾಗುವುದು. ದುರ್ಬಲ ವರ್ಗಗಳ ಕುಟುಂಬಗಳಿಗೆ ತಿಂಗಳಿಗೆ ₹6,000 ನೀಡುವ ನ್ಯಾಯ ಯೋಜನೆಯನ್ನೂ ಜಾರಿ ಮಾಡಲಾಗುವುದು. ಇದು ಕುಟುಂಬಗಳಿಗೆ ನೆರವಾಗು ವುದಲ್ಲದೆ, ಅರ್ಥ ವ್ಯವಸ್ಥೆಗೆ ಹಣ ಹರಿದು ಬರುವಂತೆಯೂ ಮಾಡಲಿದೆ ಎಂದು ಪ್ರಿಯಾಂಕಾ ವಿವರಿಸಿ ದ್ದಾರೆ.

ಕೆಲಸ ಮಾಡುವ ಮಹಿಳೆಯರಿಗಾಗಿ ಮಾರ್ಗೋವಾ ಮತ್ತು ಪಣಜಿಯಲ್ಲಿ ಹಾಸ್ಟೆಲ್‌ ನಿರ್ಮಿಸಲಾಗುವುದು. ಮಹಿಳಾ ಉಸ್ತುವಾರಿಯ ಪೊಲೀಸ್‌ ಠಾಣೆಗಳ ಸಂಖ್ಯೆ ಹೆಚ್ಚಿಸಲಾಗುವುದು. ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಲೀಟರ್‌ಗೆ ₹80ರಿಂದ ಹೆಚ್ಚಳ ಆಗದಂತೆ ನೋಡಿಕೊಳ್ಳಲಾಗುವುದು. ಉಳಿದ ಮೊತ್ತವನ್ನು ಸಹಾಯಧನದ ಮೂಲಕ ಭರಿಸಲಾಗುವುದುಎಂದು ಕಾಂಗ್ರೆಸ್‌ ಪಕ್ಷವು ಭರವಸೆ ನೀಡಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ 40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡುವ ನಿರ್ಧಾರವನ್ನು ಪ್ರಿಯಾಂಕಾ ಪುನರುಚ್ಚರಿಸಿದರು. ‘ಮಹಿಳೆಯರನ್ನು ರಾಜಕೀಯಕ್ಕೆ ತರಲು ನಾನು ಭಾರಿ ಪ್ರಯತ್ನ ನಡೆಸುತ್ತಿರುವುದು ನಿಮಗೆ ತಿಳಿದಿದೆ. ಇದಕ್ಕೆ ಎರಡು-ಮೂರು ಕಾರಣಗಳಿವೆ. ಮೊದಲನೆಯದಾಗಿ, ಜನಸಂಖ್ಯೆಯ ಶೇ 50ರಷ್ಟು ಮಹಿಳೆಯರು ಇದ್ದಾರೆ. ಹಾಗಾಗಿ, ಶೇ 50ರಷ್ಟು ಪ್ರಾತಿನಿಧ್ಯ ಹೊಂದುವುದು ಮಹಿಳೆಯರ ಹಕ್ಕು’ ಎಂದು ಪ್ರಿಯಾಂಕಾ ಪ್ರತಿಪಾದಿಸಿದರು.

‘ಈಗಿನ ರಾಜಕಾರಣವು ದ್ವೇಷ, ಸಿಟ್ಟಿನಿಂದ ತುಂಬಿ ಹೋಗಿದೆ. ಶೇಕಡಾ 90ರಷ್ಟು ಭಾಷಣಗಳು ನಕಾರಾತ್ಮಕ ವಾಗಿವೆ. ಸಕಾರಾತ್ಮಕ ಅಂಶಗಳೇ ಇಲ್ಲ. ಮಹಿಳೆಯರು ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸುವುದರಿಂದ ರಾಜಕಾರಣಕ್ಕೆ ಸಕಾರಾತ್ಮಕತೆ ಮತ್ತು ಮಮತೆಯನ್ನು ತುಂಬುವುದು ಸಾಧ್ಯ ಎಂಬುದು ನನ್ನ ದೃಢವಾದ ನಂಬಿಕೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು