News Kannada
Wednesday, October 05 2022

ಗೋವಾ

ಗೋವಾ ಐಎಫ್ಎಫ್ಐನಲ್ಲಿ ಗೋದಾವರಿ ಸಹಿತ 15 ಚಲನಚಿತ್ರಗಳು - 1 min read

Photo Credit :

ಹೊಸದಿಲ್ಲಿ: ಗೋವಾ ನಡೆಯುವ 52ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಅಂತಾರಾಷ್ಟ್ರೀಯ ಚಲನಚಿತ್ರಗಳ ಯಾದಿ ಬಿಡುಗಡೆಯಾಗಿದೆ. ಭಾರತದ ಗೋದಾವರಿ, ಮೆ ವಸಂತರಾವ್ ಮತ್ತು ಸೆಮ್ಖೋರ್ ಸಹಿತ ಒಟ್ಟು 15 ಚಲನಚಿತ್ರಗಳು ಸ್ಪರ್ಧೆಗೆ ಆಯ್ಕೆಯಾಗಿವೆ.

ಈ ಫಿಲ್ಮ್ ಫೆಸ್ಟಿವಲ್ ವರ್ಷದ ಕೆಲವು ಅತ್ಯುತ್ತಮ ಚಲನಚಿತ್ರಗಳನ್ನು ಒಳಗೊಂಡಿರುವ ಉತ್ಸವದ ಪ್ರಮುಖ ವಿಭಾಗಗಳಲ್ಲಿ ಒಂದಾಗಿದೆ. ಈ 15 ಚಲನಚಿತ್ರಗಳು ಗೋಲ್ಡನ್ ಪೀಕಾಕ್ ಮತ್ತು ಇತರ ಪ್ರಶಸ್ತಿಗಳಿಗೆ ಸ್ಪರ್ಧಿಸುತ್ತವೆ. ಈ ವಿಭಾಗದಲ್ಲಿ ಸ್ಪರ್ಧಿಸಲು ಪ್ರಪಂಚದಾದ್ಯಂತದ ಅತ್ಯುತ್ತಮ ಕಾಲ್ಪನಿಕ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾಗಿರುವ ಚಲನಚಿತ್ರಗಳು
ಎನಿ ಡೇ ನೌ – ನಿರ್ದೇಶನ : ಹ್ಯಾಮಿ ರಮೆಜಾನ್ – ಫಿನ್ಲ್ಯಾಂಡ್
ಚಾರ್ಲೆಟ್ – ನಿರ್ದೇಶನ : ಸೈಮನ್ ಫ್ರಾಂಕೋ – ಪೆರಾಗ್ವೆ
ಗೋದಾವರಿ – ನಿರ್ದೇಶನ : ನಿಖಿಲ್ ಮಹಾಜನ್ – ಮರಾಠಿ, ಭಾರತ
ಇಂಟ್ರೆಗಲ್ಡೆ – ನಿರ್ದೇಶನ : ರಾಡು ಮುಂಟೀನ್ – ರೊಮೇನಿಯಾ
ಲ್ಯಾಂಡ್ ಆಫ್ ಡ್ರೀಮ್ – ನಿರ್ದೇಶನ : ಶಿರಿನ್ ನೆಶಾತ್ ಮತ್ತು ಶೋಜಾ ಅಜಾರಿ – ನ್ಯೂ ಮೆಕ್ಸಿಕೋ, ಅಮೆರಿಕ
ಲೀಡರ್ – ನಿರ್ದೇಶನ : ಕಟಿಯಾ ಪ್ರಿವೀಜಿಯೆನ್ಸೆವ್ – ಪೋಲೆಂಡ್
ಮೆ ವಸಂತರಾವ್ – ನಿರ್ದೇಶನ : ನಿಪುಣ್ ಅವಿನಾಶ್ ಧರ್ಮಾಧಿಕಾರಿ – ಮರಾಠಿ, ಭಾರತ
ಮಾಸ್ಕೋ ಡಸ್ ನಾಟ್ ಹೇಪ್ಪನ್ – ನಿರ್ದೇಶನ : ಡಿಮಿಟ್ರಿ ಫೆಡೋರೊವ್ – ರಷ್ಯಾ
ನೋ ಗ್ರೌಂಡ್ ಬಿನೀತ್ ದಿ ಫೀಟ್ – ನಿರ್ದೇಶನ : ಮೊಹಮ್ಮದ್ ರಬ್ಬಿ ಮೃಧಾ – ಬಾಂಗ್ಲಾದೇಶ
ವನ್ಸ್ ವಿ ವೇರ್ ಗುಡ್ ಫಾರ್ ಯು – ನಿರ್ದೇಶನ : ಬ್ರಾಂಕೊ ಸ್ಮಿತ್ – ಕ್ರೊಯೇಷಿಯಾ, ಬೋಸ್ನಿಯಾ ಆ್ಯಂಡ್ ಹರ್ಜೆಗೋವಿನಾ
ರಿಂಗ್ ವಂಡರಿಂಗ್ – ನಿರ್ದೇಶನ : ಮಸಕಾಜು ಕನೇಕೋ – ಜಪಾನ್
ಸೇವಿಂಗ್ ವನ್ ಹು ವಾಸ್ ಡೆಡ್ – ನಿರ್ದೇಶನ : ವಾಕ್ಲಾವ್ ಕದ್ರಂಕಾ – ಜೆಕ್ ರಿಪಬ್ಲಿಕ್
ಸೆಮ್ಖೋರ್ – ನಿರ್ದೇಶನ: ಐಮೀ ಬರುವಾ – ದಿಮಾಸಾ, ಭಾರತ
ದ ಡೋರ್ಮ್ – ನಿರ್ದೇಶನ : ರೋಮನ್ ವಸ್ಯಾನೋವ್ – ರಷ್ಯಾ
ದ ಫಸ್ಟ್ ಫಾಲೆನ್ – ನಿರ್ದೇಶನ : ರೋಡ್ರಿಗೋ ಡಿ ಒಲಿವೇರಾ – ಬ್ರೆಜಿಲ್

ಈ ಚಲನಚಿತ್ರಗಳು ವಿವಿಧ ವಿಭಾಗಗಳ ಪ್ರಶಸ್ತಿಗಳಿಗಾಗಿ ಸ್ಪರ್ಧಿಸುತ್ತವೆ. ಅತ್ಯುತ್ತಮ ಚಲನಚಿತ್ರ (ಗೋಲ್ಡನ್ ಪೀಕಾಕ್) ಪ್ರಶಸ್ತಿಯು 40ಲಕ್ಷ ರೂ. ನಗದು ಬಹುಮಾನ ಹೊಂದಿದೆ. ಅತ್ಯುತ್ತಮ ನಿರ್ದೇಶಕ (ಸಿಲ್ವರ್ ಪೀಕಾಕ್) 15 ಲಕ್ಷ ರೂ., ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ (ಸಿಲ್ವರ್ ಪೀಕಾಕ್) ಪ್ರಶಸ್ತಿಯು ತಲಾ 10ಲಕ್ಷ ರೂ. ನಗದು ಬಹುಮಾನ ಹೊಂದಿದೆ. ವಿಶೇಷ ತೀರ್ಪುಗಾರರ ಪ್ರಶಸ್ತಿ (ಸಿಲ್ವರ್ ಪೀಕಾಕ್) 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

See also  ನಾಗಾರ್ಜುನ ಜೊತೆ ನಟಿಸಲು ಭಾರೀ ಸಂಭಾವನೆ ಕೇಳಿದ್ರಂತೆ ನಟಿ ಅಮಲಾ ಪೌಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು