ಪಣಜಿ: 6 ಲಕ್ಷ ಮೌಲ್ಯದ 6 ಕೆಜಿ ಗಾಂಜಾವನ್ನು ಗೋವಾ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಅಕ್ರಮ ಗಾಂಜಾ ಹೊಂದಿದ್ದ ಆರೋಪದ ಮೇಲೆ ರಾಜಸ್ಥಾನದ ಓಂ ಪ್ರಕಾಶ್ (29) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ (ಅಪರಾಧ ವಿಭಾಗ) ನಿಧಿನ್ ವಲ್ಸನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಗಾಂಜಾವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 6 ಲಕ್ಷ ರೂ.ಗಳ ಮೌಲ್ಯದ್ದಾಗಿದೆ ಎಂದು ಅವರು ಹೇಳಿದರು.
ಗೋವಾ ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.