ಪಣಜಿ: ಗೋವಾದ ಬೈನಾ ಬೀಚ್ ನಲ್ಲಿ ಹಾಡಹಗಲೇ ಯುವಕನೊಬ್ಬನನ್ನು ಹರಿತವಾದ ಆಯುಧದಿಂದ ಇರಿದು ಕೊಂದಿರುವ ಘಟನೆ ಸೆ.5 ರಂದು ನಡೆದಿದೆ.
ಮೃತ ಉಮೇಶ್ ಹರಿಜನ್ (33), ಮಧ್ಯಾಹ್ನ ದೇವಸ್ಥಾನದಿಂದ ಊಟ ಮಾಡಿ ಹೊರಗೆ ಬಂದಾಗ, ನಾಲ್ವರು ದಾಳಿ ಮಾಡಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾರೆ.
ಈ ಸಂಬಂಧ ಪೊಂಡಾ ಪೊಲೀಸರು ಬನಾಸ್ತರೀಮ್ ನಲ್ಲಿ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಹೊರ ರಾಜ್ಯಕ್ಕೆ ಓಡಿ ಹೋಗಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಇತರ ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಲಾಗಿದೆ.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.