News Kannada
Monday, December 11 2023
ಗೋವಾ

ಕೆನಡಾ ಭಯೋತ್ಪಾದಕರ ನೆಲೆಯಾಗಿದೆ ! – ರವಿರಂಜನ ಸಿಂಗ

Canada is home to terrorists! - Ravi Ranjan Singh
Photo Credit : Ramesh shinde

ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ತಂದೆ ಕೆನಡಾದ ಪ್ರಧಾನಮಂತ್ರಿಯಾಗಿದ್ದಾಗ ಖಲಿಸ್ತಾನದ ಬೇಡಿಕೆಯಿಟ್ಟಿದ್ದ ತಲವಿಂದರ ಸಿಂಗ ಪರಮಾರ ಎಂಬ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಸಿಕ್ಖರನ್ನು ಹತ್ಯೆ ಮಾಡಿದ್ದನು. ಅದರ ಮೊದಲು ಸಿಕ್ಸ್ ಪ್ರವಾಸಿ ಹಡಗು ‘ಕಾಮಗಾಟಮಾರು’ ಗೆ ಕೆನಡಾದಲ್ಲಿ ಪ್ರವೇಶ ನಿರಾಕರಿಸಿ ಅದರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದು ಕೆನಡಾದ ಸಿಕ್ಖ್ ಪ್ರೇಮದ ಇತಿಹಾಸವಾಗಿದೆ. ಈಗ ಕೆನಡಾ ಇದು ಭಯೋತ್ಪಾದಕರ ಸಮರ್ಥಕ ದೇಶ ಮಾತ್ರವಲ್ಲ ಭಯೋತ್ಪಾದಕರ ನೆಲೆಯಾಗಿ ಬಿಟ್ಟಿದೆ , ಎಂದು ಜಟಕಾ ಸರ್ಟಿಫಿಕೇಷನ್ ಅಥಾರಿಟಿಯ ವಿರಂಜನ ಸಿಂಗ ಇವರು ನಿಷ್ಠುರವಾಗಿ ಪ್ರತಿಪಾದಿಸಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಕೆನಡಾ ಕಾ ಹಾಥ ಖಲಿಸ್ತಾನಿ ಆತಂಕವಾದಿಕೆ ಸಾಥ’ ಈ ವಿಷಯದ ಬಗ್ಗೆ ಆಯೋಜಿಸಿರುವ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ರವಿರಂಜನ ಸಿಂಗ ಇವರು ತಮ್ಮ ಮಾತನ್ನು ಮುಂದುವರಿಸಿ, ಕೆನಡಾವು ನಜ್ಜರ್ ಇವನ ಹತ್ಯೆಯ ಆರೋಪವನ್ನು ಭಾರತದ ಮೇಲೆ ಹೊರಿಸಿದೆ, ಈ ಸುಳ್ಳು ಆಪಾದನೆ ಹಿಂದೆ ಪಾಕಿಸ್ತಾನದ ಷಡ್ಯಂತ್ರವಿದೆ. ಇತರ ದೇಶದ ಗಡಿಗೆ ಹೋಗಿ ದೇಶದ್ರೋಹಿಗಳನ್ನು ಹತ್ಯೆ ಮಾಡುವ ಕಾನೂನು ನಮ್ಮದಲ್ಲ. ಮತ್ತು ಯಾವುದೇ ಅಧಿಕಾರಿಯು ತಮ್ಮ ನೌಕರಿಯನ್ನು ಅಪಾಯಕ್ಕೊಡ್ಡಿ ಈ ರೀತಿಯ ಕೃತ್ಯ ಮಾಡುವುದಿಲ್ಲ. ಖಲಿಸ್ತಾನಿ ಇದು ಒಂದು ಎಂತಹ ರೋಗವೆಂದರೆ ಎಂದರೆ ಅದಕ್ಕೆ ಅನೇಕ ಡಾಕ್ಟರರು ಚಿಕಿತ್ಸೆ ನೀಡುತ್ತಿದ್ದಾರೆ: ಆದರೆ ಕಾರಣ ಯಾರಿಗೂ ತಿಳಿಯುತ್ತಿಲ್ಲ. ಎಲ್ಲಿಯವರೆಗೆ ಪಾಕಿಸ್ತಾನ ನೆಲಸಮವಾಗುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆಗಳು ನಾಶವಾಗುವುದಿಲ್ಲ. ದಾಳಿಯೊಂದೇ ಉಳಿವಿನ ಮಾರ್ಗವಾಗಿದೆ. ಭಾರತ ದೇಶದಲ್ಲಿ ಸಿಕ್ಖರ ಕೆಲವು ಸಮಸ್ಯೆಗಳಿವೆ : ಆದರೆ ಅವುಗಳನ್ನು ಖಲಿಸ್ತಾನದ ಜೊತೆಗೆ ಜೋಡಿಸಬಾರದು. ಆ ಸಮಸ್ಯೆಗಳನ್ನು ಕಾನೂನು ರೀತಿ ಮಂಡಿಸಬೇಕು. ಅದಕ್ಕಾಗಿ ಶತ್ರುದೇಶಗಳ ಜೊತೆ ಸೇರಿ ದೇಶ ವಿರೋಧಿ ಕಾರ್ಯ ಚಟುವಟಿಕೆ ಮಾಡುವುದು ಸರ್ವಥ ತಪ್ಪು. ಹಿಂದೂ ಮತ್ತು ಸಿಕ್ಖರು ಬಾಂಧವರಾಗಿದ್ದಾರೆ. ಇಬ್ಬರನ್ನು ಬೇರೆ ಮಾಡುವುದು ಇದು ಪಾಕಿಸ್ತಾನದ ಐ.ಎಸ್.ಐ. ನ ರಾಜಕೀಯ ಆಟವಾಗಿದೆ. ಸಿಕ್ಖರ ೪ ನೆ ತಕ್ತ ಇರುವಾಗ ೧೯೬೦ ರಲ್ಲಿ ೫ ನೆ ತಕ್ತ ನಿರ್ಮಾಣ ಮಾಡುವುದು ಇದು ಕೂಡ ಷಡ್ಯಂತ್ರದ ಭಾಗವಾಗಿದೆ. ಹಾಗೂ ಗುರುಪತವಂತ ಸಿಂಹ ಪನ್ನು ಇವನು ಸಿಕ್ಖ ಧರ್ಮದ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಅವನಿಗೆ ಸಿಕ್ಖ ರ ನೇತೃತ್ವ ವಹಿಸುವ ಯಾವುದೇ ಅಧಿಕಾರವಿಲ್ಲ ಎಂದು ಕೂಡ ಅವರು ಹೇಳಿದರು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯ ಸೌ. ಸಂದೀಪ ಮುಂಜಾಲ ಕೌರ್ ಇವರು, ಕೆನಡಾದ ಗುರುದ್ವಾರದ ಹೊರಗೆ ಇಂದಿಗೂ ನೀಜ್ಜರನ ಸಮರ್ಥನೆಯ ಪೋಸ್ಟರ್ ಹಾಕಲಾಗಿದೆ. ಅಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಛಾಯಾಚಿತ್ರ ಹಾಕಿ ಅವರ ಹತ್ಯೆಗೆ ಪ್ರಚೋದನೆ ನೀಡಲಾಗುತ್ತಿದೆ. ಖಲಿಸ್ತಾನಿ ಭಯೋತ್ಪಾದಕರು ಇಲ್ಲಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಯಾರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗಿಲ್ಲ. ಕರೀಮಾ ಬ್ಲೋಜ್ ಎಂಬ ಪ್ರಭಾವಶಾಲಿ ಮಹಿಳೆಯ ಹತ್ಯೆಯ ನಂತರ ಕೂಡ ಕೆನಡಾವು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೆನಡಾ ಸರಕಾರ ಇದು ಸಂಪೂರ್ಣವಾಗಿ ಖಲಿಸ್ತಾನಿ ಭಯೋತ್ಪಾದಕರ ಪರವಾಗಿ ನಿಂತಿರುವುದು ಕಾಣುತ್ತದೆ. ಕೆನಡಾಕ್ಕೆ ಭಾರತದಿಂದ ಅಧ್ಯಯನಕ್ಕಾಗಿ ಹೋಗಿರುವ ಮಕ್ಕಳಿಗಾಗಿ ಅವರ ಭಾರತೀಯ ಪೋಷಕರು ೮ ಅಬ್ಜ ಡಾಲರ್ ಖರ್ಚು ಮಾಡುತ್ತಾರೆ; ಆದರೆ ಯಾವ ದೇಶದ ನೀತಿಯು ಭಾರತ ವಿರೋಧಿಯಾಗಿದೆಯೋ ಅಂತಹ ದೇಶದಲ್ಲಿ ಮಕ್ಕಳಿಗೆ ಭಾರತ ವಿರೋಧವನ್ನೇ ಕಲಿಸಲಾಗುವುದು. ಈಗ ಪೋಷಕರು ಇದರ ಬಗ್ಗೆ ಯೋಚನೆ ಮಾಡುವುದು ಅವಶ್ಯಕವಾಗಿದೆ, ಎಂದು ಕೂಡ ಸೌ.ಮುಂಜಾಲ ಹೇಳಿದರು.

See also  ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ: ನಿಯಮ ಮೀರಿದರೆ 500ರೂ. ದಂಡ

ವರದಿ – ರಮೇಶ ಶಿಂದೆ
ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

46615
Ramesh shinde

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು