ಕಾಲುಗಳಲ್ಲಿ ಅನುಮಾನಾಸ್ಪದವಾದ ಸಾಧನ ಹೊಂದಿದ್ದ ಎರಡು ಪಾರಿವಾಳಗಳನ್ನು ಇಲ್ಲಿನ ದೋಣಿ ಮಾಲೀಕರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಾರಿವಾಳಗಳು ತಮ್ಮ ಕಾಲುಗಳಲ್ಲಿ ಉಂಗುರದ ಆಕಾರದ ಸಣ್ಣ ಸಾಧನವನ್ನು ಹೊಂದಿದ್ದವು ಎಂದು ತಿಳಿದುಬಂದಿದೆ. ಡಿಸೆಂಬರ್ 5 ರಂದು ಈ ಪಾರಿವಾಳಗಳು ಮೀನುಗಾರಿಕಾ ದೋಣಿಯಲ್ಲಿ ಬಂದು ಕುಳಿತಿವೆ. ಈ ದೋಣಿಯು ಶನಿವಾರ ಪೋರಬಂದರ್ ತಲುಪಿದೆ.
ದೋಣಿ ಮಾಲೀಕರು ನಮಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಸಾಧನವನ್ನು ಪಕ್ಷಿಗಳ ಕಾಲಿನಿಂದ ತೆಗೆದುಹಾಕಲಾಗುವುದು. ಆ ನಂತರ ಪರೀಕ್ಷೆಗಾಗಿ ಸಾಧನವನ್ನು ಗಾಂಧಿನಗರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಸ್ಮಿತ್ ಗೋಹಿಲ್ ತಿಳಿಸಿದ್ದಾರೆ.