ಅಹಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ ಮಾದಕ ವ್ಯಸನಿಯಾಗಿದ್ದ ಪುತ್ರನನ್ನು ತಂದೆ ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿದ ಘಟನೆ ನಡೆದಿದೆ.
ಗುಜರಾತ್ ನ ಅಹ್ಮದಾಬಾದ್ ನಿವಾಸಿ ನೀಲೇಶ್ ಜೋಶಿ(65) ಬಂಧಿತ ಆರೋಪಿ. ಈತನ ಪುತ್ರ ಸ್ವಯಂ ಜೋಶಿ(21) ಕೊಲೆಯಾದವ. ಮಾದಕ ವ್ಯಸನದ ದಾಸನಾಗಿದ್ದ ಸ್ವಯಂ ಜೋಶಿ ಮದ್ಯ ಸೇವಿಸಲು ಹಣ ಕೊಡುವಂತೆ ಪೀಡಿಸಿದಾಗ ಕೋಪಗೊಂಡ ತಂದೆ ರುಬ್ಬು ಗುಂಡಿನಿಂದ ಹೊಡೆದು ಮಗನನ್ನು ಹತ್ಯೆ ಮಾಡಿದ್ದಾನೆ.
ನಂತರ ಎಲೆಕ್ಟ್ರಿಕ್ ಕಟರ್ ನಿಂದ ತುಂಡಾಗಿ ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಬೇರೆ ಬೇರೆ ದಿಕ್ಕುಗಳಲ್ಲಿ ಎಸೆದು ಬಂದಿದ್ದಾನೆ. ನೇಪಾಳಕ್ಕೆ ಪರಾರಿಯಾಗಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನೀಲೇಶ್ ನನ್ನು ರಾಜಸ್ಥಾನದ ಗಡಿ ಭಾಗದಲ್ಲಿ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಟ್ರಾಫಿಕ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿ ನೀಲೇಶ್ ಜೋಶಿ ನಿವೃತ್ತರಾಗಿದ್ದು, ಅವರ ಪುತ್ರಿ ಮತ್ತು ಪತ್ನಿ ಜರ್ಮನಿಯಲ್ಲಿ ವಾಸವಾಗಿದ್ದಾರೆ. ಪುತ್ರ ಡ್ರಗ್ ವ್ಯಸನಿಯಾಗಿದ್ದ ಕಾರಣ ನೀಲೇಶ್ ಅಹಮದಾಬಾದ್ ನಲ್ಲಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.