News Karnataka Kannada
Saturday, April 20 2024
Cricket
ಗುಜರಾತ್

1912ರಲ್ಲಿ ನಿರ್ಮಿಸಲಾದ ಐತಿಹಾಸಿಕ ಪೊಲೀಸ್‌ ಠಾಣೆ: ವಿಶೇಷತೆ ಏನು ಗೊತ್ತಾ

Historical police station built in 1912: What's so special
Photo Credit : News Kannada

ಧೋಲ್ಕಾ: ಗುಜರಾತ್‌ ರಾಜ್ಯದ ಅಹಮದಾಬಾದ್ ಸಮೀಪದ ಧೋಲ್ಕಾ ಪೊಲೀಸ್ ಠಾಣೆಯು ತನ್ನ ಐತಿಹಾಸಿಕ ರಚನೆ, ದಾಖಲೆಗಳಿಂದ ಜಗತ್ತಿನ ಗಮನಸೆಳೆಯುತ್ತಿದೆ. ಬ್ರಿಟಿಷರ ಆಡಳಿತದ ಅವಧಿಯಲ್ಲಿ 1912 ರಲ್ಲಿ ನಿರ್ಮಿಸಲಾದ ಠಾಣೆಯೂ ಇಂದಿಗೂ ಕಟ್ಟಡದ ವಾಸ್ತುಶಿಲ್ಪ, ಬ್ರಿಟಿಷ್‌ ದಾಖಲೆಗಳಿಂದ ಜನಾಕರ್ಷಣೆಯ ಕೇಂದ್ರವಾಗಿದೆ.

ಅಹಮದಾಬಾದ್ ಸಮೀಪದ ಪೊಲೀಸ್ ಠಾಣೆಗಳಲ್ಲಿ ಒಂದನ್ನು 1912 ರಲ್ಲಿ ನಿರ್ಮಿಸಲಾಗಿದೆ. ಧೋಲ್ಕಾ ಪೊಲೀಸ್ ಠಾಣೆಯು ಗುಜರಾತ್‌ನ ಅತ್ಯಂತ ಹಳೆಯ ಠಾಣೆಗಳಲ್ಲಿ ಒಂದಾಗಿದೆ. ಕ್ರಿ.ಶ 1802 ರಲ್ಲಿ ಧೋಲ್ಕಾ ಈಸ್ಟ್ ಇಂಡಿಯಾ ಕಂಪನಿ ಆಡಳಿತದಲ್ಲಿತ್ತು. ಆಗ ಅದೊಂದು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು.

ಜನರು ಬಯಸಿದಲ್ಲಿ ಠಾಣೆ ವೀಕ್ಷಣೆ ಅವಕಾಶ: ಪ್ರಸ್ತುತ ಧೋಲ್ಕಾ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಭವೇಶ್ ರಾಥೋಡ್, “ಜನರು ಬಯಸಿದಲ್ಲಿ ಶತಮಾನಕ್ಕೂ ಹಳೆಯ ಪರಂಪರೆಯ ಪೊಲೀಸ್‌ ಠಾಣೆ ವೀಕ್ಷಣೆಗೆ ಅವಕಾಶ ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ. ದೋಲ್ಕಾ ಭಾರತದ ಅತ್ಯಂತ ಹಳೆಯ ನಗರಪಾಲಿಕೆಗಳಲ್ಲಿ ಒಂದಾಗಿದೆ. ಅಲ್ಲದೆ ಗುಜರಾತ್‌ನ ಮೊದಲ ನಾಗರಪಾಲಿಕಾ (ಪುರಸಭೆ) ಆಗಿದೆ.

ಬ್ರಿಟಿಷ್‌ ಆಡಳಿತ ಕಾಲದ ದಾಖಲೆಗಳು, ಚಿತ್ರಗಳು ಮತ್ತು ಪೀಠೋಪಕರಣಗಳು ಈ ಠಾಣೆಯಲ್ಲಿವೆ ಎಂದು ತಿಳಿಸಿದ್ದಾರೆ. ಠಾಣೆಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ಛಾವಣಿಯ ಅಂಚುಗಳ ದಿನಾಂಕಗಳು 1865 ರ ಪೊಲೀಸ್ ಠಾಣೆಯ ಇತಿಹಾಸವನ್ನು ಸೂಚಿಸುತ್ತವೆ.

ಧೋಲ್ಕಾ ಪೊಲೀಸ್ ಠಾಣೆಯು ಇಂಗ್ಲಿಷ್‌ನಲ್ಲಿ ಬರೆಯಲಾದ ದಾಖಲೆಗಳನ್ನು ಹೊಂದಿದೆ. ಅಹಮದಾಬಾದ್ ಜಿಲ್ಲಾ ಪೋಲೀಸರ ಪೂರ್ವ-ಸ್ವತಂತ್ರ ಸಂಘಟನೆಯ ಲಿಖಿತ ದಾಖಲೆ, ಅಹಮದಾಬಾದ್ ಗ್ರಾಮಾಂತರ ಜಿಲ್ಲೆಯ ವಿಭಜನೆ, ಅಹಮದಾಬಾದ್ ನಗರದಿಂದ ಬೇರ್ಪಟ್ಟ ನಂತರ ಅಹಮದಾಬಾದ್ ಗ್ರಾಮಾಂತರ ಜಿಲ್ಲೆಗೆ ಹೊಸ ಜಿಲ್ಲಾ ಕೇಂದ್ರ, ಭೋಜ್ವಾ ಪೊಲೀಸ್ ಠಾಣೆಯ ಅಪರಾಧ ಟಿಪ್ಪಣಿಗಳನ್ನು ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು