ಅಹಮದಾಬಾದ್: ಇಂಡಿಯಾ ಒಕ್ಕೂಟದ ಭಾಗವಾಗಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಪವಾರ್ ಶನಿವಾರ ಅಹಮದಾಬಾದ್‌ನಲ್ಲಿರುವ ಅದಾನಿ ಅವರ ಕಚೇರಿ ಮತ್ತು ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪವಾರ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ: “ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್‌ಮ್‌ಪವರ್ ಅನ್ನು ಗುಜರಾತ್‌ನ ಚಾಚಾರ್ವಾಡಿ ಉದ್ಯಮಿ ಗೌತಮ್ ಅದಾನಿ ಅವರೊಂದಿಗೆ ಉದ್ಘಾಟಿಸುತ್ತಿದೆ. ಇದು ಒಂದು ವಿಶೇಷ ಕಾರ್ಯಕ್ರಮ ಎಂದು ಹೇಳಿದ್ದಾರೆ. 2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲೇ ಬೇಕು ಎಂದು ಪಣತೊಟ್ಟಿರುವ ಇಂಡಿಯಾ ಬ್ಲಾಕ್ ಸದಸ್ಯರು ಗೌತಮ್ ಅದಾನಿ ಅವರು ಪ್ರಧಾನಿ ಅವರ ಆಪ್ತಮಿತ್ರ ಎಂದು ಆರೋಪ ಮಾಡುತ್ತಿವೆ. ಅಲ್ಲದೆ ಹಿಂಡೆನ್‌ಬರ್ಗ್ ವರದಿಯಲ್ಲಿ ಅದಾನಿ ಆರೋಪಿಯಾಗಿದ್ದರೂ ಪ್ರಧಾನಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಅವರಿಬ್ಬರ ನಡುವೆ ಪರಸ್ಪರ ಕೊಡುಕೊಳ್ಳುವಿಕೆಯ ಗುಪ್ತ ಒಪ್ಪಂದವಿದೆ ಎಂದು ಪದೇ ಪದೇ ಹೇಳುತ್ತಿದೆ.
ಪವಾರ್ ಮತ್ತು ಅದಾನಿ ಭೇಟಿ ಬಿಜೆಪಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರ ಹುಬ್ಬೇರಿಸಿದೆ. ಇದೇ ಜೂನ್ ನಲ್ಲಿ ಏಪ್ರಿಲ್ ಮತ್ತು ಜೂನ್‌ನಲ್ಲಿ ಪವಾರ್ ಮತ್ತು ಅದಾನಿ ಸಭೆ ನಡೆಸಿದ್ದರು. ಇದು ಕೂಡ ಬಹು ಚರ್ಚೆಗೆ ಒಳಗಾಗಿದೆ. ಪವಾರ್ ಇಂಡಿಯಾ ಒಕ್ಕೂಟದ ಪ್ರಮುಖ ಸದಸ್ಯ ಪಕ್ಷವಾಗಿದೆ.