News Kannada
Friday, March 31 2023

ಹಿಮಾಚಲ ಪ್ರದೇಶ

ಕೋವಿಡ್‌ ಲಸಿಕೆ ನೀಡಿಕೆಯಲ್ಲಿ ಶೇ.100 ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಹಿಮಾಚಲ ಪ್ರದೇಶ

Photo Credit :

ಹೊಸ ಕೋವಿಡ್ -19 ರೂಪಾಂತರದ ಒಮಿಕ್ರಾನ್‌ ಬಗೆಗಿನ  ಆತಂಕಕಾರಿ ವರದಿಗಳ ನಡುವೆ, ಹಿಮಾಚಲ ಪ್ರದೇಶವು ವೈರಸ್ ಹರಡುವಿಕೆಯ ವಿರುದ್ಧದ ಹೋರಾಟದಲ್ಲಿ ಹೊಸ ಹೆಗ್ಗುರುತು ಸಾಧಿಸಿದೆ.

ಹೌದು.. ಹಿಮಚಾಲಯ ಪ್ರದೇಶ ಕೊರೋನಾ ಲಸಿಕೆ ನೀಡಿಕೆಯಲ್ಲಿ ಶೇ.100ರ ಸಾಧನೆ ಮಾಡಿದ್ದು, ಈ ಮೂಲಕ ಸಂಪೂರ್ಣ ಲಸಿಕೆ ನೀಡದ ದೇಶದ ಮೊದಲ  ರಾಜ್ಯ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

ಈ ಬಗ್ಗೆ ಅಲ್ಲಿನ ಸರ್ಕಾರಿ ವಕ್ತಾರರೊಬ್ಬರು ಮಾಹಿತಿ ನೀಡಿದ್ದು, ಇಲ್ಲಿ 53,86,393 ಅರ್ಹ ವಯಸ್ಕರು ಎರಡೂ ಡೋಸ್​ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

“ಆಗಸ್ಟ್​ ಅಂತ್ಯದ ಹೊತ್ತಿಗೆ ಶೇ.100ರಷ್ಟು ವಯಸ್ಕರಿಗೆ ಮೊದಲ ಡೋಸ್​ ಲಸಿಕೆ ನೀಡಿಕೆ ಪೂರ್ಣಗೊಳಿಸಿದ ಮೊದಲ ರಾಜ್ಯ ನಮ್ಮದು. ಈಗ ಡಿಸೆಂಬರ್ 5 ರಂದು, ಎರಡೂ ಡೋಸ್ ಲಸಿಕೆಗಳನ್ನು ಪೂರ್ಣಗೊಳಿಸಿದ ದೇಶದ ಮೊದಲ ರಾಜ್ಯವಾಗುತ್ತೇವೆ” ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ.

ಇಂದು ಬಿಲಾಸ್​ಪುರದ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ (ಏಮ್ಸ್​​)ನಲ್ಲಿ ಕೋವಿಡ್​ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‌ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇಂದ್ರ ಸಚಿವ ಅನುರಾಗ್ ಠಾಕೂರ್​ ಸೇರಿದಂತೆ ಇತರ ಗನ್ಯರು ಆಗಮಿಸಲಿದ್ದಾರೆ.

See also  ದೇಶದಲ್ಲಿ 11,903 ಹೊಸ ಕೊವಿಡ್ ಪ್ರಕರಣಗಳು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು