NewsKarnataka
Sunday, September 26 2021

ಜಮ್ಮು-ಕಾಶ್ಮೀರ

ಪುಲ್ವಾಮಾ ಧಾಳಿಯ ಸಂಚುಕೋರ ಇಸ್ಮತ್‌ ಅಲ್ವಿ ಪೋಲೀಸ್‌ ಗುಂಡಿಗೆ ಬಲಿ

 

ಶ್ರೀನಗರ :  ಪುಲ್ವಾಮದಲ್ಲಿ  ನಡೆಸಿದ್ದ  ಭಯೋತ್ಪಾದಕ  ದಾಳಿಯ ಸಂಚುಕೋರ  ಮತ್ತು   ಜೈಶ್‌ ​-ಎ-ಮೊಹಮ್ಮದ್ ಸದಸ್ಯ ಮೊಹಮ್ಮದ್ ಇಸ್ಮಲ್ ಅಲ್ವಿ ಅಲಿಯಾಸ್ ಲಂಬೂ ಅಲಿಯಾಸ್​ ಅದ್ನಾನ್​  ಶನಿವಾರ  ನಡೆದ ಎನ್ಕಾ‌ ಕೌಂಟರ್ ನಲ್ಲಿ   ಭದ್ರತಾ ಪಡೆಗಳ ಗುಂಡಿಗೆ  ಬಲಿಯಾಗಿದ್ದಾನೆ. ಖಚಿತ ಸುಳಿವಿನ ಮೇರೆಗೆ  ಇಂದು ಬೆಳಿಗ್ಗೆ ಪುಲ್ವಾಮದ ದಾಚಿಗಮ್​ ಅರಣ್ಯ ಪ್ರದೇಶದಲ್ಲಿ ಧಾಳಿ ನಡೆಸಿದ ಭದ್ರತಾ ಪಡೆಗಳು   ಎನ್​ಕೌಂಟರ್​ನಲ್ಲಿ ಅಲ್ವಿ ಮತ್ತು ಇನ್ನೊಬ್ಬ ಜೈಶ್​  ಭಯೋತ್ಪಾದಕನನ್ನು   ಹತ್ಯೆ ಮಾಡಿದ್ದಾರೆ.
ಜೈಶ್​ ಮುಖ್ಯಸ್ಥ ಮಸೂದ್​ ಅಜರ್​ನ ಕುಟುಂಬಕ್ಕೆ ಸೇರಿದವನೆನ್ನಲಾದ ಮೃತ ಮೊಹಮ್ಮದ್​ ಇಸ್ಮಲ್ ಅಲ್ವಿ, ಪುಲ್ವಾಮ ದಾಳಿಯ ಸಂಚು ರಚಿಸುವಲ್ಲಿ ಮತ್ತು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಪಾಕಿಸ್ತಾನಿ ನಾಗರಿಕನಾಗಿದ್ದ ಈತನ ಹೆಸರು ನಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್​ಐಎ) ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.ಇಂದು ಬೆಳಿಗ್ಗೆ ಉಗ್ರವಾದಿಗಳು ಬಚ್ಚಿಟ್ಟುಕೊಂಡಿರುವ ಸುಳಿವು ಸಿಕ್ಕ ಭದ್ರತಾ ಪಡೆ ಮತ್ತು ಕಾಶ್ಮೀರ ಪೊಲೀಸರು ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಆಗ ಇಬ್ಬರು ಉಗ್ರವಾದಿಗಳು ಗುಂಡು ಹಾರಿಸಲು ಆರಂಭಿಸಿದಾಗ, ಎನ್​ಕೌಂಟರ್​ನಲ್ಲಿ ಸಾವಪ್ಪಿದರು. ಮೃತಪಟ್ಟವರಲ್ಲಿ ಒಬ್ಬ ಇಸ್ಮಲ್​ ಅಲ್ವಿಯಾಗಿ ಗುರುತಿಸಲ್ಪಟ್ಟಿದ್ದರೆ, ಮತ್ತೊಬ್ಬನ ಗುರುತು ಇನ್ನೂ ಪತ್ತೆ ಹಚ್ಚಲಾಗುತ್ತಿದೆ ಎನ್ನಲಾಗಿದೆ.
ದಶಕಗಳಲ್ಲೇ ಅತ್ಯಂತ ಬರ್ಬರವಾದ ದಾಳಿಯಾಗಿದ್ದ ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ, 40 ಸೈನಿಕರು ಮೃತಪಟ್ಟಿದ್ದರು. ಜೈಶ್​ ಸಂಘಟನೆಯ ಸೂಯಿಸೈಡ್​ ಬಾಂಬರ್​​​ಗಳು 2019 ಫೆಬ್ರವರಿ 14 ರಂದು​ ಈ ದಾಳಿ ನಡೆಸಿದ್ದರು. ಇದಾದ ನಂತರ ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಜೈಶ್​ ಸಂಘಟನೆಯ ಶಿಬಿರಗಳ ಮೇಲೆ ಭಾರತ ಏರ್​ಸ್ಟ್ರೈಕ್ ನಡೆಸಿತ್ತು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!