ಕಾಶ್ಮೀರ, ; ಜಮ್ಮು ಹಾಗೂ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ ಹಲವು ಕ್ರಾಂತಿಕಾರಕ ಬದಲಾವಣೆ ನಡೆದಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಿ, ಇಲ್ಲಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪುಷ್ಠಿ ನೀಡಲಾಗಿದೆ. ಇದೀಗ ನಡೆದ ಬೆಳವಣಿಗೆಯಲ್ಲಿ ಸ್ಥಳಾಂತರಗೊಂಡಿರುವ ಕಾಶ್ಮೀರಿ ಪಂಡಿತರ ಸ್ಥಿರ ಆಸ್ತಿಪಾಸ್ತಿಗಳನ್ನು ಸಂರಕ್ಷಣೆ ಮಾಡುವಂತೆ ಜಮ್ಮು ಹಾಗೂ ಕಾಶ್ಮೀರ ಆಡಳಿತ ಆದೇಶ ನೀಡಿದೆ. ಸದ್ಯ ಜಮ್ಮು ಕಾಶ್ಮೀರ ಆಡಳಿತದ ಈ ನಿರ್ಧಾರವನ್ನು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರ ಸಮುದಾಯವು ಸ್ವಾಗತಿಸಿದೆ.
ಸ್ಥಳಾಂತರಗೊಂಡ ಪಂಡಿತರಿಗಾಗಿ ಆನ್ಲೈನ್ ಪೋರ್ಟಲ್ ತಯಾರಿಸಲು ಜಮ್ಮು ಹಾಗೂ ಕಾಶ್ಮೀರ ಆಡಳಿತವು ಕಂದಾಯ ಇಲಾಖೆಗೆ ಸೂಚಿಸಿದೆ. ಇದರಿಂದ ಕಾಶ್ಮೀರಿ ಪಂಡಿತರು ತಮ್ಮ ಭೂ ಅತಿಕ್ರಮಣಗಳ ಬಗ್ಗೆ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ. ಅದೂ ಅಲ್ಲದೆ ಕಾಶ್ಮೀರ ಕಣಿವೆಯ ಎಲ್ಲಾ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳು 15 ದಿನಗಳೊಳಗೆ ಕಾಶ್ಮೀರಿ ಪಂಡಿತರ ಆಸ್ತಿಗಳ ಸಮೀಕ್ಷೆ, ಕ್ಷೇತ್ರ ಪರಿಶೀಲನೆಯನ್ನು ಕೈಗೊಳ್ಳುವಂತೆ ಆಡಳಿತ ಸೂಚಿಸಿದೆ. ಕಾಶ್ಮೀರದ ವಿಭಾಗೀಯ ಆಯುಕ್ತರಿಗೆ ಅನುಸರಣಾ ವರದಿಯನ್ನು ಸಲ್ಲಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅತಿಕ್ರಮಣದಾರರು ಮತ್ತು ಅಕ್ರಮ ನಿವಾಸಿಗಳನ್ನು ಕಾಲಮಿತಿಯಲ್ಲಿ ಹೊರಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಾಶ್ಮೀರ ಪಂಡಿತರ ಸ್ತಿರಾಸ್ತಿಗಳ ಸಂರಕ್ಷಿಸಲು ಮುಂದಾದ ಕೇಂದ್ರ ಸರ್ಕಾರ - 1 min read
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.