News Kannada
Monday, December 05 2022

ಜಮ್ಮು-ಕಾಶ್ಮೀರ

ಭಾರತೀಯ ಸೇನೆಗೆ ಸಿಕ್ಕಿಬಿದ್ದ ಪಾಕಿಸ್ತಾನಿ ಉಗ್ರ ಬಾಬರ್ ಅಲಿ ಪತ್ರಾ

Photo Credit :

ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಉಗ್ರ ಬಾಬರ್ ಅಲಿ ಪತ್ರಾ (19) ಭಾರತೀಯ ಸೇನೆಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದಾನೆ.

ತಾನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿದ್ದು, ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಮಾಧ್ಯಮದೊಂದಿಗೆ ಮಾತನಾಡುತ್ತಾ ಬಾಬರ್ ಅಲಿ ಪತ್ರಾ, ‘ನಾನು ಪಾಕಿಸ್ತಾನದ ಒಕರ ಪಂಜಾಬ್ ನಿವಾಸಿ. ನನ್ನ ತಂದೆ ತೀರಿಕೊಂಡಿದ್ದಾರೆ. ಮನೆಯಲ್ಲಿ ನನ್ನ ತಾಯಿ ಮತ್ತು ಅಕ್ಕ ಇದ್ದಾರೆ. ಅಕ್ಕನಿಗೆ ಮದುವೆಯಾಗಿದೆ. ನಾನು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನನಗೆ ಐಎಸ್‌ಐ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಅನಿಸ್ ಎಂಬಾತನ ಪರಿಚಯವಾಯಿತು.

ಅವನು ನನಗೆ ಹಣ ನೀಡುವುದಾಗಿ ಹೇಳಿದ್ದ. ನನಗೆ ಬಡತನವಿದ್ದ ಕಾರಣ ನಾನು ಅವನೊಂದಿಗೆ ಹೋಗಿ ಲಷ್ಕರ್‌ಗೆ ಸೇರಿಕೊಂಡೆ. ನಮಗೆ ತರಬೇತಿ ನೀಡುವ ಸಮಯದಲ್ಲಿ ಅವರು ನಮಗೆ 20,000 ರೂ. ನೀಡುತ್ತಿದ್ದರು. ತರಬೇತಿ ಮುಗಿದ ಬಳಿಕ ನಮಗೆ 30,000 ರೂ.ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾನೆ.

ನಾವು ಭಾರತದ ಗಡಿ ನುಸುಳುತ್ತಿದ್ದ ವೇಳೆ ಭಾರತೀಯ ಸೇನೆಯು ನನ್ನ ಜೊತೆಗಿದ್ದ ಭಯೋತ್ಪಾದಕರಲ್ಲಿ ಒಬ್ಬನನ್ನು ಕೊಂದಿತು. ಆದರೆ ನಮ್ಮ ಜೊತೆಗಿದ್ದ ಉಳಿದ ನಾಲ್ವರು ಪರಾರಿಯಾಗಿದ್ದಾರೆ. ನಾನು ಭಯದಿಂದ ಅಲ್ಲೇ ಕುಳಿತೆ. ಸೈನಿಕರು ನನ್ನನ್ನು ಬಂಧಿಸಿದರು. ನಾವು ಒಳನುಸುಳಿಕೊಂಡು ನೇರವಾಗಿ ಪಟಾನ್​ಗೆ ಹೋಗಬೇಕಾಗಿತ್ತು ಎಂದು ಆತ​ ತಿಳಿಸಿದ್ದಾನೆ.

See also  ಶ್ರೀನಗರ: ಭದ್ರತಾ ಪಡೆ-ಉಗ್ರರ ನಡುವೆ ಗುಂಡಿನ ಚಕಮಕಿ,ಇಬ್ಬರು ಉಗ್ರರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು