ಕಾಶ್ಮೀರ:ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ನಡೆದ ಭದ್ರತಾ ಪಡೆಗಳೊಂದಿಗಿನ ಎನ್‍ಕೌಂಟರ್‍ನಲ್ಲಿ ಜೈಷ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಯಾಸಿರ್ ಪಾರೊ ಮತ್ತು ಓರ್ವ ವಿದೇಶಿ ಉಗ್ರಗಾಮಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದಕ್ಷಿಣ ಕಾಶ್ಮೀರ ಜಿಲ್ಲೆಯ ಕಾಸ್ ಬಯಾರ್ ಪ್ರದೇಶದಲ್ಲಿ ಎನ್‍ಕೌಂಟರ್ ನಡೆಯಿತು.
ಹತರಾದವರಲ್ಲಿ ಓರ್ವ ಜೆಇಎಂ ಕಮಾಂಡರ್ ಮತ್ತು ಸುಧಾರಿತ ಸ್ಪೋಟಕ ಸಾಮಗ್ರಿ ತಜ್ಞ ಎಂದು ಕಾಶ್ಮೀರ ಪೊಲೀಸ್ ಮಹಾ ನಿರೀಕ್ಷಕ ವಿಜಯ್‍ಕುಮಾರ್ ಹೇಳಿದ್ದಾರೆ.