News Kannada
Saturday, May 14 2022
ಜಮ್ಮು-ಕಾಶ್ಮೀರ

ಜಮ್ಮು ಕಾಶ್ಮೀರದ 11 ಕಡೆ ದಾಳಿ ನಡೆಸಿದ ಎನ್‌ಐಎ: ರಾಷ್ಟ್ರೀಯ ತನಿಖಾದಳ

ಜಮ್ಮು ಕಾಶ್ಮೀರ: ಲಷ್ಕರ್-ಎ-ತೊಯ್ಬಾದ ಸಂಘಟನೆಯಾದ ಟಿಆರ್‌ಎಫ್‌ನ ಕಮಾಂಡರ್ ಸಜಾದ್ ಗುಲ್ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರೇರೇಪಿಸುವ ವಿಷಯದ ತನಿಖೆಗೆ ಸಂಬಂದಿಸಿದಂತೆ  ಜಮ್ಮು ಕಾಶ್ಮೀರದ ನಾಲ್ಕು ಕಡೆಗಳಲ್ಲಿ ಎನ್‌ ಐ ಎ ದಾಳಿ ನಡೆಸಿರುವುದಾಗಿ ಹೇಳಿದೆ.

ಶ್ರೀನಗರದಲ್ಲಿ 6 , ಬಾರಾಮುಲ್ಲದಲ್ಲಿ 2, ಅವಂತಿಪೋರಾ , ಬದ್ಗಾಮ್ ಮತ್ತು ಕುಲ್ಗಾಮ್ ಸೇರಿದಂತೆ 11 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳಲ್ಲಿ ಭಯೋತ್ಪಾದಕ ಬಸಿತ್ ಅಹ್ಮದ್ ದಾರ್ ಅವನ ಮನೆಯೂ ಸೇರಿದೆ. ಇತ್ತೀಚೆಗೆ ಅವನ ವಿರುದ್ಧ ಎನ್ಐಎ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿತ್ತು.

ಈ ಸಂದರ್ಭದಲ್ಲಿ ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್‌ಗಳು, ಡಿಜಿಟಲ್ ಸ್ಟೋರೇಜ್ ಸಾಧನಗಳು ಮತ್ತು‌ ಕೆಲವು ದಾಖಲೆಗಳೂ ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಷ್ಕರ್-ಎ-ತೈಬಾ ಮತ್ತು ದಿ ರೆಸಿಸ್ಟೆನ್ಸ್‌ಗೆ ಬೆಂಬಲ ನೀಡಲು ಪಾಕಿಸ್ಥಾನದಲ್ಲಿರುವ ಎಲ್‌ಇಟಿಯ ಇತರ ಸಹ ಕಮಾಂಡರ್‌ಗಳೊಂದಿಗೆ ಸೇರಿ ಸಾಜದ್ ಗುಲ್‌ ತನ್ನ ಅಕ್ರಮ ಚಟುವಟಿಗಳ ಸಂಯೋಜನೆ, ಸಮನ್ವಯ, ಶಸ್ತ್ರಾಸ್ತ್ರ ಸಾಗಣೆ ಮುಂತಾದವುಗಳಿಗೆ ಕೆಲಸರಗಾರರನ್ನು ನೇಮಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.