ಕಾಶ್ಮೀರ: ಕುಪ್ವಾರಾ ಜಿಲ್ಲೆಯ ಜುಮಾಗುಂಡ್ ಪ್ರದೇಶದಲ್ಲಿ ಮೂವರು ಲಷ್ಕರ್ ಎ ತೋಯ್ಬಾದ ಉಗ್ರರನ್ನು ಕಾಶ್ಮೀರ ಪೋಲೀಸರು ಹತ್ಯೆ ಮಾಡಿದ್ದಾರೆ.
ಈ ಕುರಿತು ಕಾಶ್ಮೀರ ಪೋಲೀಸ್ ಐಜಿಪಿ ವಿಜಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು “ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಮೂವರೂ ಲಷ್ಕರ್ ಉಗ್ರ ಸಂಘಟನೆಗೆ ಸೇರಿದವರೆಂದು ಗುರುತಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರ ಮದ್ದುಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಜುಮಾಗುಂಡ್ ಪ್ರದೇಶದಲ್ಲಿ ಭಯೋತ್ಪಾದಕ್ರು ಅಕ್ರಮ ನುಸುಳುವಿಕೆಗೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆ ಕಾರ್ಯನಿರತರಾದ ಪೋಲೀಸ್ ಪಡೆಗಳು ಉಗ್ರರನ್ನು ಹತ್ತಿಕ್ಕುವಲ್ಲಿ ಸಫಲರಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ