ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಶುಕ್ರವಾರ ಬಿಹಾರದ ಕಾರ್ಮಿಕನನ್ನು ಉಗ್ರರು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಮುಂಜಾನೆ 1 ಗಂಟೆ ಸುಮಾರಿಗೆ ಬಂಡಿಪೋರಾದ ಹಾಜಿನ್ ಪ್ರದೇಶದ ಸದ್ನಾರಾ ಗ್ರಾಮದಲ್ಲಿ ಬಿಹಾರದ ಕಾರ್ಮಿಕ ಮುಹಮ್ಮದ್ ಅಮ್ರೇಜ್ (19) ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ.
ವೈದ್ಯರು ಅವರನ್ನು ಶ್ರೀನಗರದ ಬೆಮಿನಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಅವರು ಬಿಹಾರಕ್ಕೆ ಸೇರಿದವರು. ಶೋಧಕ್ಕಾಗಿ ಈ ಪ್ರದೇಶವನ್ನು ಸುತ್ತುವರಿಯಲಾಗಿದೆ” ಎಂದು ಅವರು ಹೇಳಿದರು.