ಜಮ್ಮು: ಜಮ್ಮು- ಕಾಶ್ಮೀರದಲ್ಲಿ 1400 ಕೋಟಿ ರೂ. ವೆಚ್ಚದ ಐಫೆಲ್ ಟವರ್‌ಗಿಂತಲೂ 35 ಮೀಟರ್ ಅಧಿಕ ಎತ್ತರದ, ಏಕ ಕಮಾನಿನ ರೈಲ್ವೇ ಸೇತುವೆ ನಿರ್ಮಾಣ ಕಾರ್ಯ ಅಂತಿಮಗೊಂಡಿದೆ. ಇಂಜಿನಿಯರಿಂಗ್ ವಿಸ್ಮಯ ಎನಿಸಿಕೊಳ್ಳಲಿರುವ ಈ ಸೇತುವೆ ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಸೇತುವೆ ಎಂದೂ ಕರೆಸಿಕೊಳ್ಳಲಿದೆ.
ಈ ವರ್ಷದ ಕೊನೆಯಲ್ಲಿ ಸೇತುವೆ ಲೋಕಾರ್ಪಣೆಯಾಗಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಭವ್ ತಿಳಿಸಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ರೈಲ್ವೇ ಮಾರ್ಗಕ್ಕೆ ಅಡ್ಡಲಾಗಿರುವ ಚೆನಾಬ್ ನದಿಯ ರೈಲ್ವೆ ಸೇತುವೆ ಚಿತ್ರಗಳನ್ನು ಸಚಿವರು ಹಂಚಿಕೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 8.5ರಷ್ಟು ಪ್ರಮಾಣದ ಭೂಕಂಪವನ್ನೂ ತಡೆದುಕೊಳ್ಳುವಂತೆ ಇದನ್ನು ಕಟ್ಟಲಾಗಿದೆ. 260 ಕಿಲೋಮೀಟರ್ ಅತ್ಯಧಿಕ ವೇಗದ ಗಾಳಿ ಅತಿಯಾದ ಉಷ್ಣತೆ, ನೀರಿನ ಮಟ್ಟದ ಪರೀಕ್ಷೆ ಎಲ್ಲವನ್ನೂ ನಡೆಸಲಾಗಿದೆ’ ಎಂದು ಅಶ್ವಿನಿ ವೈಷ್ಣವ ವಿವರ ನೀಡಿದ್ದಾರೆ.
बादलों के बीच अद्भुत इंजीनियरिंग का नमूना पेश करता चिनाब रेल पुल।
जम्मू-कश्मीर के रियासी जिले में चिनाब नदी पर बन रहे 359 मीटर ऊंचे चिनाब पुल का एक शानदार दृश्य।#Infra4India pic.twitter.com/5uIW7mZqoJ
— Ministry of Railways (@RailMinIndia) February 8, 2022