ಶ್ರೀನಗರ: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಕಮಾಂಡರ್ ಉಜೈರ್ ಖಾನ್ ಹತ್ಯೆಯಾಗಿದ್ದಾನೆ. ಮತ್ತೊಬ್ಬ ಉಗ್ರನ ಶವವನ್ನು ಸೇನೆ ಪತ್ತೆ ಮಾಡಿದೆ. ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಇಂದು ಈ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕ ಉಜೈರ್ ಖಾನ್ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಉಜೈರ್ ಹತ್ಯೆಯೊಂದಿಗೆ ಒಂದು ವಾರದ ಅನಂತನಾಗ್ ಎನ್‌ಕೌಂಟರ್ ಅಂತ್ಯಗೊಂಡಿದೆ.
ಅನಂತ್‌ನಾಗ್ ಜಿಲ್ಲೆಯ ಗರೋಲ್ ಅರಣ್ಯದಲ್ಲಿ ಒಂದು ವಾರದ ಜಂಟಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಕೊನೆಗೊಂಡಿದೆ ಆದರೆ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಕಾಶ್ಮೀರ ಹೆಚ್ಚುವರಿ ಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಸೋಮವಾರ ಪತ್ತೆಯಾದ ಶವವನ್ನು ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಜೈರ್ ಖಾನ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಮತ್ತೋರ್ವ ಭಯೋತ್ಪಾದಕನ ಶವ ಪತ್ತೆಯಾಗಿದೆ ಆದರೆ ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.