ತಿರುವನಂತಪುರಂ: ಕೇರಳಕ್ಕೆ ಯಕೆಯಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್ ಕಾಣಿಸಿಕೊಂಡಿದೆ.
ಇದು ಕೇರಳದಲ್ಲಿ ಕಾಣಿಸಿಕೊಂಡ ಮೊದಲ ಓಮಿಕ್ರಾನ್ ಸೋಂಕು ಪ್ರಕರಣ ಆಗಿದೆ. ಭಾನುವಾರ ಎರ್ನಾಂಕುಲಂನಲ್ಲಿ ವ್ಯಕ್ತಿಯಲ್ಲಿ ಕೋವಿಡ್ ಹೊಸ ರೂಪಾಂತರ ಕಾಣಿಸಿಕೊಂಡಿದೆ.
ಆತ ಡಿಸೆಂಬರ್ 6 ರಂದು ಅಬುಧಾಬಿಯಲ್ಲಿ ಇದ್ದು ಬಳಿಕ ಯುಕೆಯಿಂದ ಕೊಚ್ಚಿಗೆ ಬಂದಿದ್ದರು. ಡಿಸೆಂಬರ್ 8 ರಂದು ಪಾಸಿಟಿವ್ ಬಂದಿದ್ದು, ಬಳಿಕ ಜಿನೋಮ್ ಸಿಕ್ವೆಂನ್ಸಿಗ್‌ನಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ.
ಆತನ ಪತ್ನಿ ಹಾಗೂ ತಾಯಿಗೂ ಕೂಡಾ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಅವರನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.