News Kannada
Friday, October 07 2022

ಕೇರಳ

ಕೇರಳ: ಇಲಿಗೆ ಇಟ್ಟಿದ್ದ ವಿಷ ಸೇವಿಸಿ 3 ವರ್ಷದ ಬಾಲಕ ಸಾವು - 1 min read

Uttara Kannada: 2-year-old boy dies after consuming mosquito repellent liquid
Photo Credit :

ಕೇರಳ : ಮನೆಯಲ್ಲಿಇಲಿಗಳು ಕಾಟ ಕೊಡುವುದು ಸಾಮಾನ್ಯ. ಅದನ್ನು ಓಡಿಸ್ಬೇಕು ಅಂತ ನಾನಾ ವಿಧದ ತಂತ್ರ ಪ್ರಯೋಗಿಸುತ್ತಾರೆ. ತರತರದ ಕಸರತ್ತು ನಡೆಸುತ್ತಾರೆ. ಕೆಲವರು ಇಲಿ ಕೊಲ್ಲಲು ರ್ಯಾಟ್ ಪಾಯ್ಸನ್ ಸಹ ಬಳಸುತ್ತಾರೆ. ಆದರೆ ಇಲಿ ಕೊಲ್ಲಲು ಬಳಸುವ ವಿಷಕಾರಿ ವಸ್ತುಗಳು ಅದೆಷ್ಟೋ ಬಾರಿ ಮನುಷ್ಯನ ಜೀವವನ್ನೇ ತೆಗೆದಿವೆ.

ಆತ 3 ವರ್ಷದ ಪುಟ್ಟ ಬಾಲಕ. ಆ ಬಾಲಕ ಮನೆಯಲ್ಲಿ ಆಟ ಆಡುತ್ತಾ ಇದ್ದ. ಆತನ ಅಮ್ಮ ಮನೆಯಲ್ಲಿ ಏನೋ ಕೆಲಸ ಮಾಡುತ್ತಾ ಇದ್ದಳು. ಹೊರಗಡೆ ಮಗ ಆಡುತ್ತಿದ್ದಾನೆ ಅಂತ ಮಗನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಹೊರಗೆ ಆಟವಾಡುತ್ತಿದ್ದ ಕಂದಮ್ಮ ಅನಾಹುತ ಮಾಡಿಕೊಂಡು ಬಿಟ್ಟಿತ್ತು. ಇಲಿಗೆ ಅಂತ ಇಟ್ಟಿದ್ದ ವಿಷವನ್ನು ಅದ್ಯಾವುದೋ ತಿನ್ನುವ ವಸ್ತು ಅಂತ ತಿಳಿದುಕೊಂಡು ಈ ಪುಟ್ಟ ಬಾಲಕ ತಿಂದು ಬಿಟ್ಟಿದ್ದ.

ಇಲಿಗೆ ಇಟ್ಟಿದ್ದ ವಿಷ ಸೇವಿಸಿದ್ದ ಬಾಲಕ ಅಸ್ವಸ್ಥಗೊಂಡು ಕಿರುಚಾಡಿದ್ದಾನೆ. ಇದನ್ನು ಕೇಳಿ ಓಡಿ ಬಂದ ಅಮ್ಮನಿಗೆ ಒಂದು ಕ್ಷಣ ಜೀವವೇ ನಿಂತು ಹೋದಂತೆ ಆಗಿದೆ. ಯಾಕೆಂದರೆ ಆ ಬಾಲಕ ಅಲ್ಲೇ ಇಲಿ ಸಾಯಿಸಲು ಅಂತ ಇಟ್ಟಿದ್ದ ವಿಷವನ್ನು ತಿಂದು ಬಿಟ್ಟಿದ್ದ. ಇದನ್ನು ತಿಳಿದ ತಾಯಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಕೂಡಲೇ ಅಕ್ಕಪಕ್ಕದವರು, ಹಾಗೂ ಬಾಲಕನ ಮನೆಯವರು ಬಂದು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಸ್ಥಳೀಯ ಆಸ್ಪತ್ರೆಯಲ್ಲಿ ಬಾಲಕನಿಗೆ ಕೂಡಲೇ ಚಿಕಿತ್ಸೆ ನೀಡಿದ್ದಾರೆ. ಆದರೆ ಬಾಲಕನಿಗೆ ಹೆಚ್ಚಿನ ತಜ್ಞ ಚಿಕಿತ್ಸೆ ಅಗತ್ಯವಿದ್ದ ಕಾರಣ ಕೊಟ್ಟಾಯಂನಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂರು ದಿನಗಳ ಕಾಲ ಬಾಲಕನಿಗೆ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ಕೇರಳ ರಾಜ್ಯದ ಮಲಪ್ಪುರಂನಲ್ಲಿ ಇಂಥದ್ದಂದು ಘಟನೆ ನಡೆದಿದೆ. ಇಲ್ಲಿನ ಪರಪನಗಡಿಯ ಚೆಟ್ಟಿಪಾಡಿ ಎಂಬ ಗ್ರಾಮದಲ್ಲಿ ಅನ್ಸಾರ್ ಎಂಬವರ 3 ವರ್ಷದ್ದೆ ಪುತ್ರ ರಸಿಂಷಾ ಎಂಬ ಬಾಲಕ ಇಲಿ ಪಾಷಾಣ ಸೇವಿಸಿ ಮೃತಪಟ್ಟ ಮೃತಪಟ್ಚ ನ-ನತದೃಷ್ಟ. ಇದೀಗ ಮಗುವನ್ನು ಕಳೆದುಕೊಂಡು ಅಪ್ಪ, ಅಮ್ಮ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಇದ್ದಾರೆ.

See also  1.5 ವರ್ಷಗಳ ನಂತರ ಕೇರಳದ ಶಾಲೆಗಳು ಇಂದಿನಿಂದ ಮತ್ತೆ ಪ್ರಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು