News Kannada
Tuesday, December 12 2023
ಕೇರಳ

ಕೇರಳ: ಮತ್ತೊಂದು ಮಂಕಿಪಾಕ್ಸ್ ಸೋಂಕು ದೃಢ

Bengaluru: Border areas on high alert in the wake of monkey pox
Photo Credit : Twitter

ಕೇರಳ: ಮತ್ತೊಂದು ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಎರಡನೇ ಕೇಸ್ ಕಾಣಿಸಿಕೊಂಡಿದೆ.
ಯುಎಇಯಿಂದ ಬಂದಿದ್ದ ಕೇರಳದ ವ್ಯಕ್ತಿಯಲ್ಲಿ ಆಫ್ರಿಕಾ ವೈರಸ್​ ಮಂಕಿಪಾಕ್ಸ್​ ಪತ್ತೆಯಾದ ಬೆನ್ನಲ್ಲೇ ಇನ್ನೊಬ್ಬ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ವಿದೇಶಕ್ಕೆ ತೆರಳಿದ್ದ ಈ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣ ಮೂಲಕ ಕೇರಳದ ಕಣ್ಣೂರಿಗೆ ಆಗಮಿಸಿದ್ದಾನೆ. ಈ ವೇಳೆ, ನಡೆಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್​ ಗುಣಲಕ್ಷಣಗಳು ಕಂಡು ಬಂದಿವೆ.

ಬಳಿಕ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಪಾಸಿಟಿವ್​ ಆಗಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದು ದೇಶದ ಎರಡನೇ ಮಂಕಿಪಾಕ್ಸ್​ ಪ್ರಕರಣವಾಗಿದೆ. ಈ ವೈರಸ್​ ಈಗಾಗಲೇ ವಿಶ್ವದ 27 ರಾಷ್ಟ್ರಗಳಿಗೆ ವ್ಯಾಪಿಸಿದೆ.

See also  ಮೈಸೂರು: ಶಾಲೆಗೆ ಬೀಗ ಜಡಿದ ಡಿಡಿಪಿಐ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು