ತಿರುವನಂತಪುರಂ, ಜ.21: ಸಿಂಥೆಟಿಕ್ ಡ್ರಗ್ ಎಂಡಿಎಂಎನೊದಿಗೆ ಮಗನನ್ನು ಬಂಧಿಸಿದ ನಂತರ 55 ವರ್ಷದ ಮಹಿಳೆಯೊಬ್ಬರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಗ್ರೇಸಿ ಕ್ಲೆಮೆಂಟ್ ಅವರ 25 ವರ್ಷದ ಮಗ ಶೈನ್ ಕ್ಲೆಮೆಂಟ್ ಅವರನ್ನು ಶುಕ್ರವಾರ ಸಂಜೆ ನಾಲ್ಕು ಗ್ರಾಂ ಎಂಡಿಎಂಎ ಹೊಂದಿದ್ದಕ್ಕಾಗಿ ಬಂಧಿಸಿದ ನಂತರ ಈ ಕ್ರಮ ಕೈಗೊಂಡಿದ್ದಾರೆ ಎಂದು ತೋರುತ್ತದೆ.
ಅದರ ಬಗ್ಗೆ ತಿಳಿದ ಗ್ರೇಸಿ ವಿಚಲಿತಳಾದಳು. ಇಂದು ಬೆಳಿಗ್ಗೆ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.