ತಿರುವನಂತಪುರಂ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ 20 ಮಿಲಿಯನ್ ಯುಎಇ ದಿರ್ಹಮ್ಗಳ (ಸುಮಾರು 45 ಕೋಟಿ ರೂ.) ಲಾಟರಿ ಗೆದ್ದಿದ್ದಾರೆ.
ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಲವ್ಲ್ಮೋಲ್ ಅಚಾಮಾ 45 ಕೋಟಿ ರೂ. ಗೆದ್ದಿದ್ದಾರೆ. ಅಚಾಮಾ ತನ್ನ ಕುಟುಂಬದೊಂದಿಗೆ ಕಳೆದ 21 ವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಚಾಮಾ ಬಿಗ್ ಟಿಕೆಟ್ ತೆಗೆದುಕೊಳ್ಳುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಅಬುದಾಬಿಯಲ್ಲಿ ನರ್ಸ್ ಆಗಿರುವ ಅಚಾಮಾ ನರ್ಸ್ ಅವರು ಬಹುಮಾನದ ಮೊತ್ತದ ಒಂದು ಭಾಗವನ್ನು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಬಾಕಿಹಣವನ್ನು ಬಡವರ ಶಿಕ್ಷಣ ಮತ್ತು ದಾನಕ್ಕೆ ಬಳಸುತ್ತೇನೆ ಎಂದಿದ್ದಾರೆ. ಶನಿವಾರ ನಡೆದ ಇತರ ಡ್ರಾಗಳಲ್ಲಿ ನಾಲ್ವರು ಕೇರಳಿಗರು ಬಹುಮಾನ ಗೆದ್ದಿದ್ದಾರೆ.