News Kannada
Friday, June 09 2023
ಕೇರಳ

ಪರ್ವತ ಏರುವ ಸಾಹಸಕ್ಕೆ ಕೋಟಿ ಕೋಟಿ ರೂ. ಬ್ಯಾಂಕ್‌ ಸಾಲ: ಕೇರಳದ ಸಾಹಸಿ ವ್ಯಕ್ತಿಯ ಅಚ್ಚರಿಯ ಹವ್ಯಾಸ

This Kerala govt employee takes loans to climb mountains
Photo Credit :

ತಿರುವನಂತಪುರಂ: ನಾವೂ, ನೀವು ಸೇರಿದಂತೆ ಹೆಚ್ಚಿನವರು ಮನೆ ನಿರ್ಮಾಣ, ಕಾರು ಖರೀದಿಗೆ ಸಾಲ ಪಡೆಯುವುದು ಸಾಮಾನ್ಯ. ಆದರೆ ಕೇರಳದ ವ್ಯಕ್ತಿಯೊಬ್ಬರು ಪರ್ವತ ಏರುವ ಸಾಹಸಕ್ಕಾಗಿ ಬ್ಯಾಂಕ್‌ ಸಾಲ ಪಡೆಯುತ್ತಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಪಂದಳಂ ಮೂಲದ 36 ವರ್ಷದ ಕೇರಳದ ಸರ್ಕಾರಿ ನೌಕರ ಶೇಖ್ ಹಸನ್ ಖಾನ್ ಈ ಸಾಹಸಮಯಿ ವ್ಯಕ್ತಿ. ಖಾನ್‌ ರಾಜ್ಯ ಸಚಿವಾಲಯದಲ್ಲಿ ಹಣಕಾಸು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಖಾನ್‌ ಅವರು ಮೌಂಟ್ ಎವರೆಸ್ಟ್ ಮತ್ತು ಕಿಲಿಮಂಜಾರೊವನ್ನು ಏರಿದ್ದಾರೆ. ತನ್ನ ಪರ್ವತ ಏರುವ ಸಾಹಸದ ಬಗ್ಗೆ ಅಮೆರಿಕದ ಡೆನ್ವರ್‌ನಿಂದ ಫೋನ್‌ನಲ್ಲಿ ಐಎಎನ್‌ಎಸ್‌ನೊಂದಿಗೆ ತನ್ನ ಅನುಭವ ಹಂಚಿಕೊಂಡಿದ್ದಾರೆ. ತನ್ನ ಮುಂದಿನ ಚಾರಣವು ಅಲಾಸ್ಕಾ ಪರ್ವತ ಶ್ರೇಣಿಯ ಮೂರನೇ ಅತಿ ಎತ್ತರದ ಶಿಖರವಾದ ಮೌಂಟ್ ಡೆನಾಲಿ ಏರುವುದರೊಂದಿಗೆ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಪರ್ವತ ಏರಲು ಅವರ ಜೊತೆಗೆ ಮೂವರು ಅಮೆರಿಕನ್ನರಿದ್ದಾರೆ. ಕಳೆದ ವರ್ಷ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದಾಗ ಅವರೊಂದಿಗೆ ಅಮೆರಿಕದ ಒಬ್ಬರು ಸಾಥ್‌ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ನನಗೆ 185 ದೇಶಗಳ ಅತ್ಯಂತ ಎತ್ತರದ ಶಿಖರಗಳನ್ನು ಏರುವ ನನ್ನ ಗುರಿಯಿದೆ. ಈ ಗುರಿ ತಲುಪಲು ಐದು ವರ್ಷಗಳ ರಜೆ ತೆಗೆದುಕೊಳ್ಳಲು ಯೋಜಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜುಲೈನಲ್ಲಿ ನಾನು ರಷ್ಯಾಕ್ಕೆ ಆಗಸ್ಟ್‌ನಲ್ಲಿ ಜಪಾನ್‌ಗೆ ತಲುಪುತ್ತೇನೆ. 2023 ಕ್ಕೆ, ವಿವಿಧ ದೇಶಗಳಲ್ಲಿ 15 ಶಿಖರಗಳನ್ನು ಏರುವುದು ನನ್ನ ಗುರಿ ಎಂದು ಖಾನ್ ಹೇಳಿದ್ದಾರೆ.
ಆದರೆ ತನ್ನ ಗುರಿಯನ್ನು ಸಾಧಿಸಲು ಖಾನ್ ಅವರಿಗೆ ಪರ್ವತದ ಸಮಸ್ಯೆ ಇದೆ. ಅದಕ್ಕಾಗಿ ಅವರಿಗೆ ಸುಮಾರು 2.50 ಕೋಟಿ ರೂ. ಅಗತ್ಯವಿದೆ. ಅದಕ್ಕಾಗಿ ಅವರು ಪ್ರಾಯೋಜಕರನ್ನು ಹುಡುಕುತ್ತಿದ್ದಾರೆ.

ಖಾನ್ ಅವರು ಈಗ ಅವರು 2.5 ಮಿಲಿಯನ್ ರೂಪಾಯಿಗಳ ಸಾಲವನ್ನು ಹೊಂದಿದ್ದಾರೆ. ನಾನು ರಾಜ್ಯ ಸರ್ಕಾರಿ ಉದ್ಯೋಗವನ್ನು ಹೊಂದಿರುವುದರಿಂದ ಬ್ಯಾಂಕ್ ಸಾಲ ಪಡೆಯುವುದು ಸುಲಭವಾಗಿದೆ. ನನಗೆ ಮನೆ ನಿರ್ಮಿಸುವ ಯೋಚನೆಯಿಲ್ಲ. ಅಲ್ಲದೆ ನಾನು ಪಡೆದ ಸಾಲವನ್ನು ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಖಾನ್‌ ಅವರ ಪತ್ನಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಆಕೆ ಇವರ ಸಾಧನೆಯ ಬೆನ್ನೆಲುಬು. ಅಂತೆಯ ಅವರ ಆರು ವರ್ಷದ ಪುತ್ರಿ ಖಾನ್‌ ಸಾಧನೆಗೆ ಸ್ಪೂರ್ತಿಯಾಗಿದ್ದಾರೆ. ತಾನು ಏರುವ ಪ್ರತಿ ಶಿಖರದಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ಖಾನ್ ಮರೆಯುವುದಿಲ್ಲ. ಆತ್ಮತೃಪ್ತಿ, ಹವಾಮಾನ ಬದಲಾವಣೆ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಪರ್ವತ ಏರುವ ಸಾಹಸದ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಖಾನ್‌ ಸಾಹಸ ನಮಗೆಲ್ಲರಿಗೂ ಸ್ಪೂರ್ತಿಯೆಂದರೆ ತಪ್ಪಲ್ಲ.

See also  ರಾಹುಲ್‌ ಗಾಂಧಿ ಸಂಸತ್ ಕ್ಷೇತ್ರಕ್ಕೆ ಇಂದು ಸಚಿವೆ ಸ್ಮೃತಿ ಇರಾನಿ ಭೇಟಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು