ದೆಹಲಿ: ಹಳೇ ಸಂಸತ್ ಭವನದ ಕೊನೆಯ ದಿನವಾದ ಇಂದು ಹಲವು ಪ್ರಮುಖ ಗಣ್ಯರಿಗೆ ಮಾತನಾಡಲು ಅಹ್ವಾನ ನೀಡಲಾಗಿತ್ತು. ಹೊಸ ಸಂಸತ್ ಭವನದಲ್ಲಿನ ವಿಶೇಷ ಅಧಿವೇಶನಕ್ಕೂ ಮೊದಲು ಲೋಕಸಭಾ ಹಿರಿಯ ಸದಸ್ಯೆ ಮೇನಕಾ ಗಾಂಧಿ ಭಾಷಣ ಮಾಡಿದ್ದಾರೆ.
ನನಗೆ ಮಾತನಾಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ. ನಾವು ಹೊಸ ಸಂಸತ್ ಭವನಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಈ ಮೂಲಕ ಹೊಸ ಭಾರತದ ನಿರ್ಮಾಣವಾಗುತ್ತಿದೆ. ಪತಿ ನಿಧನದ 9 ವರ್ಷಗಳ ಬಳಿಕ ನಾನು ಸಂಸತ್ ಪ್ರವೇಶ ಮಾಡಿದೆ. ನನಗೆ ಸುಲಭದ ಪಯಣವಾಗಿರಲಿಲ್ಲ. ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ಆದರೆ ನಾನು ಬಿಜೆಪಿಯ ಸದಸ್ಯ ಅನ್ನೋದೇ ಹೆಮ್ಮೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.
ಲೋಕಸಭಾ ಸಂಸದೆಯಾಗಿ ಹಲವು ಜವಬ್ದಾರಿ ನಿರ್ವಹಿಸಿದ್ದೇನೆ. ಸಚಿವೆಯಾಗಿ ಕೆಲಸ ಮಾಡಿದ್ದಾರೆ. ದೇಶ್ ಗ ಗ್ರಾಮದಲ್ಲಿರುವ ಪ್ರತಿಯೊಬ್ಬನಿಗೆ ಸೌಲಭ್ಯ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ.
ನನ್ನ ರಾಜಕೀಯ ಜೀವನದಲ್ಲಿ ಕಲಿತಕೊಂಡ ಪ್ರಮುಖ ಒಂದು ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ. ಸಾಧಸುವ ಛಲ ನಿಮ್ಮಲ್ಲಿರಲಿ. ಈ ಪಯಣದಲ್ಲಿ ಹಲವು ಏಳುಬೀಳುಗಳು ಸಹಜ. ಆದರೆ ನಿಮ್ಮನ್ನು ನಂಬಿ ಹಲವು ಜನರಿರುತ್ತಾರೆ. ದೇಶದ ನಿಮ್ಮಿಂದ ಉತ್ತಮ ಕೆಲಸವನ್ನು ಬಯಸುತ್ತದೆ. ಅದಕ್ಕಾಗಿ ಶ್ರಮವಹಿಸಿ ಕೆಲಸ ಮಾಡಿ. ಪ್ರಾಮಾಣಿಕವಾಗಿ ಕೆಲಸ ಮಾಡುವ ಧ್ಯೇಯ ನಿಮ್ಮದಾಗಲಿ ಎಂದು ಮೇನಕಾ ಗಾಂಧಿ ಸಂಸದರಿಗೆ ಕಿವಿ ಮಾತು ಹೇಳಿದ್ದಾರೆ.