ಮಧ್ಯಪ್ರದೇಶದ ಸಚಿವರೊಬ್ಬರು ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ. ಹೌದು, ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು ಗ್ವಾಲಿಯರ್‌ನ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ.
ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭ ಸಚಿವರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಏನಾದರೂ ತೊಂದರೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾಳೆ.ಸಮಸ್ಯೆ ತಕ್ಷಣವೇ ಪರಿಹರಿಸಲು ಸಚಿವರು ಸ್ವತಃ ತಾವೇ ಟಾಯ್ಲೆಟ್ ತಿಕ್ಕಿದ್ದಾರೆ.
ನಾನು 30 ದಿನಗಳ ಸ್ವಚ್ಛತೆಗೆ ಪ್ರತಿಜ್ಞೆ ಮಾಡಿದ್ದೇನೆ. ಪ್ರತಿದಿನ ಯಾವುದಾದರೂ ಸಂಸ್ಥೆಗೆ ತೆರಳಿ ನನ್ನ ಕೈಲಾದ ಶುಚಿತ್ವ ಕಾಪಾಡುತ್ತೇನೆ. ಸ್ವಚ್ಛತೆಯ ಸಂದೇಶ ಎಲ್ಲರನ್ನೂ ತಲುಪಲಿ, ಇದರಿಂದ ಪ್ರೇರಣೆ ಪಡೆದು ಎಲ್ಲೆಡೆ ಸ್ವಚ್ಛತೆ ಇರಲಿ ಎಂದು ಮೊದಲ ಹೆಜ್ಜೆಯಾಗಿ ನಾನೇ ಶೌಚಾಲಯ ಶುಚಿಗೊಳಿಸುತ್ತೇನೆ ಎಂದಿದ್ದಾರೆ. ತದನಂತರ ಶಾಲೆಗಳು, ಸಂಸ್ಥೆಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.