News Kannada
Monday, October 03 2022

ಮಧ್ಯ ಪ್ರದೇಶ

ಮಧ್ಯಪ್ರದೇಶ: ಗಂಡು ಮಗು ಹುಟ್ಟಿದ ಖುಷಿಗೆ 19 ವರ್ಷದ ಯುವಕನನ್ನೇ ಬಲಿ ಕೊಟ್ಟ ವ್ಯಕ್ತಿ - 1 min read

Chikkaballapur: Brother kills youth for molesting sister
Photo Credit : Pexels

ರೇವಾ: ಮಧ್ಯಪ್ರದೇಶದ ರೇವಾದಲ್ಲಿ ಗಂಡು ಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ 19 ವರ್ಷದ ಯುವಕನನ್ನೇ ಬಲಿ ನೀಡಿದ್ದಾನೆ.

ರಾಮ್‌ಲಾಲ್‌ ಈ ಕೃತ್ಯವೆಸಗಿದ ವ್ಯಕ್ತಿ. ರಾಮ್‌ಲಾಲ್‌ಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ನಾಲ್ಕನೇ ಮಗು ಗಂಡಾಗಿ ಜನಿಸಿದೆ.  ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರೆ ಯುವಕನನ್ನು ಬಲಿ ಕೊಡುತ್ತೇನೆ ಎಂದು ಗ್ರಾಮ ದೇವತೆಗೆ ಪ್ರಾರ್ಥನೆ ಸಲ್ಲಿಸಿದ್ದ. ಕಾಕಾತಾಳೀಯ ಎಂಬಂತೆ ಗಂಡು ಮಗುವಿಗೆ ಆತನ ಪತ್ನಿ ಜನ್ಮ ನೀಡಿದ್ದು, ಮಗುವಿನ ಜನನದ ಬಳಿಕ ಆತ ದೇಗುಲದಲ್ಲಿ ಯುವಕನ ತಲೆ ಕಡಿದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 32 ವರ್ಷದ ಪ್ರಾಯದ ರಾಮ್‌ಲಾಲ್‌ ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ದುರಾಸೆಗಾಗಿ ಕಿಯೋತಿ ನಿವಾಸಿ 19 ವರ್ಷ ಪ್ರಾಯದ ದಿವ್ಯಾಂಶು ಕೊಲ್ ಎಂಬಾತನನ್ನು ಬಲಿ ನೀಡಿದ್ದಾನೆ. ಜುಲೈ 6 ರಂದು, ರಾಮ್‌ಲಾಲ್‌, ತನ್ನ ತಮ್ಮ ಮೇಕೆಗಳನ್ನು ಮೇಯಿಸುತ್ತಿದ್ದ ದಿವ್ಯಾಂಶು ಅವರನ್ನು ನೋಡಿದ್ದಾನೆ. ನಂತರ ಸಹಾಯ ಮಾಡುವಂತೆ ದಿವ್ಯಾಂಶುವನ್ನು ಕರೆದ ರಾಮ್‌ಲಾಲ್‌ ಆತನನ್ನು ಉಪಾಯವಾಗಿ ಗ್ರಾಮದ ದೇವಿ ದೇವಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ರಾಮಲಾಲ್ ಮಾತು ನಂಬಿ ಆತನಿಗೆ ಸಹಾಯ ಮಾಡಲು ದೇಗುಲಕ್ಕೆ ತೆರಳಿದ ದಿವ್ಯಾಂಶುವಿನ ತಲೆ ಕಡಿದು ಆತನ ಶವವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ರೇವಾ ಸಿರ್ಮೌರ್‌ನ ಉಪವಿಭಾಗಾಧಿಕಾರಿ ನವೀನ್ ತಿವಾರಿ ಹೇಳಿದ್ದಾರೆ.

ಇತ್ತ ದಿವ್ಯಾಂಶು ನಾಪತ್ತೆಯಾದ ಬಗ್ಗೆ ಆತನ ಮನೆಯವರು ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಜುಲೈ 6 ರಂದು ದೇಗುಲದಲ್ಲಿ ದಿವ್ಯಾಂಶು ಶವ ಪತ್ತೆ ಮಾಡಿದರು. ನಂತರ ತನಿಖೆ ಮಾಡಿದಾಗ ದಿವ್ಯಾಂಶು ಅವರು ಕೊನೆಯದಾಗಿ ರಾಮಲಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಪೊಲೀಸರು ರಾಮ್‌ಲಾಲ್‌ ಅವರನ್ನು ವಿಚಾರಣೆ ನಡೆಸಿದಾಗ, ಅವರು ದಾರಿತಪ್ಪಿಸಲು ಪ್ರಯತ್ನಿಸಿದರು. ಆದರೆ ಕೊನೆಗೆ ತಮ್ಮ ಅಪರಾಧವನ್ನು ಒಪ್ಪಿಕೊಂಡರು.

 

See also  ಹೈಕೋರ್ಟ್ : ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ, ಇದು ಯೋಜಿತ ಹಿಂಸಾಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು