News Karnataka Kannada
Thursday, April 25 2024
ಮಧ್ಯ ಪ್ರದೇಶ

ಭೋಪಾಲ್: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆರಡು ಚಿರತೆ ಮರಿಗಳ ಸಾವು

Two more leopard cubs found dead in Kuno National Park
Photo Credit : Pixabay

ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿದ್ದ ಹೆಣ್ಣು ಚಿರತೆ ಸಿಯಾಯಾ ಅಕ್ಕ ಜ್ವಾಲಾದ ಮತ್ತೆರಡು ಮರಿಗಳು ಸಾವನ್ನಪ್ಪಿದೆ ಎಂದು ರಾಜ್ಯ ಅರಣ್ಯ ಇಲಾಖೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಮೇ 23 ರಂದು ಮೊದಲ ಮರಿ ಸಾವನ್ನಪ್ಪಿದ ನಂತರ, ಉಳಿದ ಮೂರು ಮರಿಗಳನ್ನು ಪಾಲ್ಪುರದಲ್ಲಿ ಪಶುವೈದ್ಯರ ನಿಕಟ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಇದೀಗ ನಾಲ್ಕನೇ ಮರಿಯ ಆರೋಗ್ಯವು ಹದಗೆಟ್ಟಿದೆ ಮತ್ತು ಪಾಲ್ಪುರದಲ್ಲಿ ಪಶುವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದೆ,” ಎಂದು ಅದು ಹೇಳಿದೆ.

ಎಲ್ಲಾ ಮರಿಗಳು ದುರ್ಬಲ, ಕಡಿಮೆ ತೂಕ ಮತ್ತುನಿರ್ಜಲೀಕರಣದಿಂದ ಬಳಲುತ್ತಿದ್ದವು ಎಂದು ಅರಣ್ಯ ಇಲಾಖೆ ತಿಳಿಸಿದೆ. “ನಮೀಬಿಯಾದ ಹೆಣ್ಣು ಚಿರತೆ ಜ್ವಾಲಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದು, ನಾಲ್ಕು ಮರಿಗಳಿಗೆ ಜನ್ಮನೀಡಿತ್ತು. ಅಲ್ಲದೆ ಅವು ತಾಯಿಯೊಂದಿಗೆ ನಡೆಯಲು ಪ್ರಾರಂಭಿಸಿದ್ದವು. ಆದರೆ ಅವುಗಳಲ್ಲಿ ಮೂರು ಸಾವನಪ್ಪಿವೆ ಎಂದು ಅರಣ್ಯ ಇಲಾಖೆ ಹೇಳಿದೆ.

ಇತ್ತೀಚಿನ ಸಾವಿನಿಂದಾಗಿ ಕೆಎನ್‌ಪಿಯಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಆಫ್ರಿಕನ್ ದೇಶಗಳಿಂದ ಸ್ಥಳಾಂತರಗೊಂಡ ಚಿರತೆಗಳ ಸಾವಿನ ಸಂಖ್ಯೆ ಆರಕ್ಕೇರಿದೆ. ಚಿರತೆ ಜ್ವಾಲಾವನ್ನು ಸೆಪ್ಟೆಂಬರ್ 2022 ರಲ್ಲಿ ನಮೀಬಿಯಾದಿಂದ ಶಿಯೋಪುರ್ ಜಿಲ್ಲೆಯ ಕೆಎನ್‌ಪಿಗೆ ಕರೆತರಲಾಗಿತ್ತು. ಮಾರ್ಚ್ ಕೊನೆಯ ವಾರದಲ್ಲಿ ಅದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ಮಾರ್ಚ್‌ನಲ್ಲಿ ಮೊದಲ ನಮೀಬಿಯಾದ ತಂದ ಒಂದು ಚಿರತೆ ಸತ್ತ ನಂತರ ಒಂದು ವಾರದೊಳಗೆ ನಾಲ್ಕು ಮರಿಗಳು ಜನಿಸಿದ್ದವು. 20 ಚಿರತೆಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ನಮೀಬಿಯಾದಿಂದ ಸ್ಥಳಾಂತರಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು