ಭೋಪಾಲ್: ಕಾಂಗ್ರೆಸ್ ನಾಯಕರು ಬೆಳ್ಳಿ ಚಮಚದೊಂದಿಗೆ ಜನಸಿದ್ದು, ಅವರಿಗೆ ಬಡವರು ವಾಸ ಮಾಡುವ ಕಾಲನಿಗಳು ಪಕ್ ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಬಡ ರೈತರ ಹೊಲಗಳು ಕಾಂಗ್ರೆಸ್ ನಾಯಕರಿಗೆ ವಿಡಿಯೊ ಚಿತ್ರೀಕರಣದ ಸ್ಥಳಗಳಾಗಿವೆ. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಮಧ್ಯಪ್ರದೇಶದಲ್ಲಿ ಬಿಜೆಪಿಯ ಮೆಗಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು , ಪ್ರತಿಪಕ್ಷಗಳ ಘಮಾಂಡಿಯಾ (ಅಹಂಕಾರಿ) ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ಹೊಸ ಶಾಸನವನ್ನು ಉಲ್ಲೇಖಿಸಿದ ಅವರು ಘಮಾಂಡಿಯಾ ಒಕ್ಕೂಟವು ಮಹಿಳಾ ಮೀಸಲಾತಿ ಮಸೂದೆಯನ್ನು ಇಷ್ಟವಿಲ್ಲದೆ ಬೆಂಬಲಿಸಿತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಈಗ ಅರ್ಬನ್ ನಕ್ಸಲರಿಂದ ನಡೆಸಲ್ಪಡುತ್ತದೆ. ಘೋಷಣೆಗಳಿಂದ ಹಿಡಿದು ನೀತಿ ರೂಪಿಸುವವರೆಗೆ ಕಾಂಗ್ರೆಸ್ ಈಗ ಎಲ್ಲವನ್ನೂ ಅರ್ಬನ್ ನಕ್ಸಲರಿಗೆ ಹೊರಗುತ್ತಿಗೆ ನೀಡುವ ಕಂಪನಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಮಧ್ಯಪ್ರದೇಶದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ. ಎಲ್ಲಾ ಭರವಸೆಗಳನ್ನು ಈಡೇರಿಸುವುದು ಮೋದಿಯವರ ಗ್ಯಾರಂಟಿ. ಕಾಂಗ್ರೆಸ್‌ಗಿಂತ ಭಿನ್ನವಾಗಿ ತನ್ನ ಪಕ್ಷವು ನೀಡುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಂದು ಮೋದಿ ಹೇಳಿದರು.
Urban Naxals are running the Congress Party! pic.twitter.com/sLHFuLg8fy
— Narendra Modi (@narendramodi) September 25, 2023