NewsKarnataka
Saturday, November 27 2021

ಮಹಾರಾಷ್ಟ್ರ

“ED ನೋಟಿಸ್ ರಾಜಕಾರಣಿಗಳಿಗೆ ಲವ್ ಲೆಟರ್ ಇದ್ದಂತೆ

ಮುಂಬೈ ; ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುವ ಜಾರಿನಿರ್ದೇಶನಾಲಯ ರಾಜಕೀಯ ಕಾರ್ಯಕರ್ತರಿಗೆ ನೀಡುವ ನೋಟಿಸ್ ಮರಣಶಾಸನವಲ್ಲ. ಅದು ಪ್ರೇಮ ಪತ್ರ ಎಂದು ಶಿವಸೇನೆಯ ಪ್ರಮುಖರಾದ ರಾಜ್ಯಸಭಾ ಸದಸ್ಯ ಸಂಜಯ್‍ರಾವತ್ ಲೇವಡಿ ಮಾಡಿದ್ದಾರೆ. ಜಾರಿನಿರ್ದೇಶನಾಲಯ ಮಹಾರಾಷ್ಟ್ರದ ಶಿವಸೇನೆ ನಾಯಕ ಹಾಗೂ ಸಚಿವ ಅನಿಲ್‍ಪರಬ್ ಅವರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಂಜಯ್ ರಾವತ್, ಮಹಾರಾಷ್ಟ್ರದ ಮಹಾವಿಕಾಸ್ ಅಗಡಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡಿ ವಿಫಲವಾದ ಬಳಿಕ ಈ ರೀತಿಯ ಪ್ರೇಮ ಪತ್ರಗಳು ಹೆಚ್ಚಾಗಿವೆ. ಪರಬ್ ಮೇಲೆ ಬಿಜೆಪಿ ನಾಯಕರು ಕಣ್ಣಿಟ್ಟಿದ್ದಾರೆ. ಅವರು ವಿಚಾರಣೆಗೆ ಸಹಕಾರ ನೀಡಲಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಮೊದಲು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‍ದೇಶ್‍ಮುಖ್ ವಿರುದ್ಧ ಕೂಡ ಜಾರಿನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.
ದೇವಸ್ಥಾನಗಳನ್ನು ತೆರೆಯಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಬಿಜೆಪಿ ರಾಜ್ಯ ಘಟಕ ನಡೆಸುತ್ತಿರುವ ಪ್ರತಿಭಟನೆಗೆ ತಿರುಗೇಟು ನೀಡಿದ ಸಂಜಯ್‍ರಾವತ್ ಕೋವಿಡ್ ಸೋಂಕು ಹೆಚ್ಚಿರುವ ಕಾರಣಕ್ಕೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹಬ್ಬಹರಿದಿನಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

C Indresh

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!