News Kannada
Friday, January 27 2023

ಮಹಾರಾಷ್ಟ್ರ

ದಕ್ಷಿಣ ಆಫ್ರಿಕಾದಿಂದ ಮಹಾರಾಷ್ಟ್ರಕ್ಕೆ ಬಂದವರಿಗೆ ಕೊರೊನಾ

Photo Credit :
ಮುಂಬೈ: ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ಸದ್ಯ ಎಲ್ಲರ ತಲೆನೋವಿಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಿಂದ ಬಂದ 6 ಪ್ರಯಾಣಿಕರಿಗೆ ಕೊರೊನಾ ವೈರಸ್ ಸೋಂಕು ಕಂಡು ಬಂದಿದೆ.

ಸ್ಥಳೀಯ ಆಡಳಿತ ಈ ಬಗ್ಗೆ ಎಚ್ಚರಿಕೆ ಹೆಜ್ಜೆಯಿಡುತ್ತಿದೆ.

ಒಮಿಕ್ರಾನ್ ಸುದ್ದಿಯಲ್ಲಿರುವಾಗ, ವಿದೇಶದಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಕಂಡು ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಮುಂಬೈ, ಕಲ್ಯಾಣ್-ಡೊಂಬಿವಲಿ, ಮೀರಾ ಭಯಂದರ್ ಮತ್ತು ಪುಣೆಯಲ್ಲಿ ತಲಾ 1 ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನೈಜೀರಿಯಾದಿಂದ ಹಿಂದಿರುಗಿದ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಇವರೆಲ್ಲರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದ್ದು, ಅವರ ಸಂಪರ್ಕಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ ಎಂದು ಇಲಾಖೆ ಹೇಳಿದೆ.

ಕೊರೊನಾ ವೈರಸ್‌ ಹೊಸ ರೂಪಾಂತರ ಒಮಿಕ್ರಾನ್ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿದೆ. ಈಗಾಗಲೇ ಎಲ್ಲ ರಾಜ್ಯಗಳಿಗೂ ಸಲಹೆ ರವಾನೆ ಮಾಡಿದೆ. ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ಇದೇ ವೇಳೆ ದೇಶದಲ್ಲಿ ಒಮಿಕ್ರಾನ್ ಯಾವುದೇ ಪ್ರಕರಣ ಪತ್ತೆಯಾಗಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ.

See also  ರಫ್ತು ನಿಷೇಧ ಪರಿಣಾಮ: ಬಂದರಿನಲ್ಲಿ ಉಳಿದ ತಾಳೆ ಎಣ್ಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು