News Kannada
Monday, March 27 2023

ಮಹಾರಾಷ್ಟ್ರ

19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿದ ಸಹೋದರ

Photo Credit :

ಮುಂಬೈ : ತಾಯಿಯ ಸಹಾಯದಿಂದಲೇ 19 ವರ್ಷದ ಗರ್ಭಿಣಿ ಸಹೋದರಿಯ ಶಿರಚ್ಛೇದನ ಮಾಡಿ, ರುಂಡವಿಲ್ಲದ ಮುಂಡದೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅಮಾನುಷವಾಗಿ ವರ್ತಿಸಿರೋ ಅಮ್ಮ-ಮಗನ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ನಡೆದಿರುವಂತ ಘಟನೆ ಇದಾಗಿದ್ದು, ಮರ್ಯಾದಾ ಹತ್ಯೆಯೆಂದೇ ಹೇಳಲಾಗುತ್ತಿದೆ. ಕಳೆದ ಜೂನ್ ನಲ್ಲಿ ಪ್ರಿಯಕರನೊಂದಿಗೆ ಔರಂಗಾಬಾದ್ ನ ಯುವತಿ ಕೀರ್ತಿ ಥೋರ್ ಓಡಿ ಹೋಗಿ ಮದುವೆಯಾಗಿದ್ದರು.

ಹೀಗೆ ಓಡಿಹೋಗಿದ್ದಂತ ಮಗಳಿಗೆ ಕರೆ ಮಾಡಿದ್ದಂತ ತಾಯಿ, ನಿನ್ನ ನೋಡಬೇಕು ಅನಿಸ್ತಾ ಇದೆ ಎಂದಿದ್ದಕ್ಕೇ ಆಕೆಯ ಮನೆಯ ವಿಳಾಸ ನೀಡೀ ಬರುವಂತೆ ತಿಳಿಸಿದ್ದಾಳೆ. ಭಾನುವಾರದಂದು ತಾಯಿ-ಮಗ ಕೀರ್ತಿ ಥೋರ್ ಮನೆಗೆ ತೆರಳಿ, ಮನೆಯಲ್ಲಿ ಪತಿಯನ್ನು ಬೇರೆ ಕೋಣೆಯಲ್ಲಿ ಕೂಡಿ ಹಾಕಿದಂತ ತಾಯಿ-ಮಗ, ಟೀ ಮಾಡುತ್ತಿದ್ದಂತ ಕೀರ್ತಿಗೆ ಹಿಂಬದಿಯಿಂದ ತಲೆಗೆ ಹೊಡಿದ್ದಾರೆ.

ಗರ್ಭಿಣಿಯಾಗಿದ್ದಂತ ಕೀರ್ತಿ ತಲೆಗೆ ಪೆಟ್ಟುಗೊಂಡು ಕುಸಿದು ಬಿದ್ದಾಗ, ತಾಯಿ ಆಕೆಯ ಕಾಲನ್ನು  ಡಿದುಕೊಂಡ್ರೇ.. ಆಕೆಯ ಸಹೋದರ ಕುಡುಗೋಲಿನಿಂದ ತಲೆಯನ್ನು ಕತ್ತರಿಸಿದ್ದಾನೆ. ಹೀಗೆ ಮರ್ಯಾದೆ ಹತ್ಯೆಗೈದು, ಈ ವಿಚಾರ ಹೊರಗಡೆಯ ಜನರಿಗೆ ತಿಳಿಯಲಿ ಎಂದು ಹೊರಗೆ ಕತ್ತರಿಸಿದ ತಲೆಯನ್ನು ತಂದು ಸೆಲ್ಫಿಯನ್ನು ಅಮ್ಮ-ಮಗ ಕ್ಲಿಕ್ಕಿಸಿಕೊಂಡಿರೋದಾಗಿ ತಿಳಿದು ಬಂದಿದೆ.

ಈ ಸಂಬಂಧ ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೀರ್ತಿಯನ್ನು ಹತ್ಯೆಗೈದಂತ ತಾಯಿ-ಮಗನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

See also  ಉಕ್ರೇನ್‌ನಿಂದ 183 ಭಾರತೀಯರನ್ನು ಮುಂಬೈಗೆ ಕರೆತಂದ ಏರ್ ಇಂಡಿಯಾ ವಿಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು