News Kannada
Sunday, December 04 2022

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಒಂದೇ ದಿನ 6 ಓಮಿಕ್ರಾನ್ ಪ್ರಕರಣ ವರದಿ

Photo Credit :

ನವದೆಹಲಿ: ಮಹಾರಾಷ್ಟ್ರದಲ್ಲಿ ಭಾನುವಾರ ಓಮಿಕ್ರಾನ್ ಕೋವಿಡ್-19 ರೂಪಾಂತರಿ ಸೋಂಕು ಹರಡಿರುವ 6 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ 6 ಪ್ರಕರಣಗಳು ವರದಿಯಾಗುವ ಮೂಲಕ ಆ ರಾಜ್ಯದಲ್ಲಿನ ಓಮಿಕ್ರಾನ್ ಸೋಂಕಿತರ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಸೋಂಕು ತಗುಲಿಸಿಕೊಂಡಿರುವ 6 ಮಂದಿಯ ಪೈಕಿ 5 ಮಂದಿ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದಾರೆ. 54 ಪ್ರಕರಣಗಳ ಪೈಕಿ 22 ಪ್ರಕರಣಗಳು ಮುಂಬೈ ನಲ್ಲಿ ಪತ್ತೆಯಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಓಮಿಕ್ರಾನ್ ಪ್ರಕರಣಗಳು 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ- ಮಹಾರಾಷ್ಟ್ರ (54) ದೆಹಲಿ (22) ರಾಜಸ್ಥಾನ (17) ಕರ್ನಾಟಕ (14) ತೆಲಂಗಾಣ (20) ಗುಜರಾತ್ (9) ಕೇರಳ (11) ಆಂಧ್ರಪ್ರದೇಶ (1) ಚಂಡೀಗಢ (1) ತಮಿಳುನಾಡು (1) ಪಶ್ಚಿಮ ಬಂಗಾಳ (1) ಪ್ರಕರಣಗಳು ವರದಿಯಾಗಿವೆ.ಈ ನಡುವೆ ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ 45 ವರ್ಷದ ಎನ್‌ಆರ್‌ಐ ಮತ್ತು ಹದಿಹರೆಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ.

 

See also  ಮಾದಕದ್ರವ್ಯ ವಿರೋಧಿ ಯೋಜನೆಗೆ ಮಹಾರಾಷ್ಟ್ರ ಕ್ಯಾಬಿನೆಟ್ 13.7 ಕೋಟಿ ರೂ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು