News Kannada
Thursday, March 23 2023

ಮಹಾರಾಷ್ಟ್ರ

ಆನ್ಲೈನ್ ನಲ್ಲಿ ಹಲ್ದಿರಾಮ್ಸ್​ ತಿಂಡಿ ಆರ್ಡರ್​ ಮಾಡಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್

Photo Credit : IANS

ಮುಂಬೈ : ಫೇಸ್​ಬುಕ್​ನಲ್ಲಿ ನೋಡಿದ ಜಾಹೀರಾತನ್ನು ನಂಬಿ ಹಲ್ದಿರಾಮ್ಸ್​ ತಿಂಡಿಯನ್ನು ಖರೀದಿಸಲು ಆರ್ಡರ್​ ಮಾಡಿದ ಮುಂಬೈ ವಿಲೆ​ ಪಾರ್ಲೆಯ 44 ವರ್ಷದ ಸಿವಿಲ್​ ಇಂಜಿನಿಯರ್​ ಸೈಬರ್ ವಂಚನೆಗೆ ಒಳಗಾಗಿದ್ದು, 18,666 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಸೈಬರ್​ ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ವಿಲೆ​ ಪಾರ್ಲೆ ಪೊಲೀಸ್​ ಠಾಣೆಯಲ್ಲಿ ಗುರುವಾರದಂದು ದೂರನ್ನು ದಾಖಲಿಸಿದ್ದಾರೆ.ಜನವರಿ 28 ಕಚೇರಿಯಲ್ಲಿ ಇದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಫೇಸ್​ಬುಕ್​ನಲ್ಲಿ ಹಲ್ದಿರಾಮ್ಸ್​​ನ ಸ್ವೀಟ್​ಗಳು ಹಾಗೂ ಸ್ನ್ಯಾಕ್​ಗಳ ಬಗ್ಗೆ ಜಾಹೀರಾತನ್ನು ನೋಡಿದ ಅವರು ಅಲ್ಲಿ ನೀಡಲಾದ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ದಾರೆ. ಇವರು ಸೈಬರ್ ವಂಚಕರು ಎಂಬುದು ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತನಾಡಿದ್ದಾರೆ.

ಸೈಬರ್​ ವಂಚಕರು ಎಸ್​ಎಂಎಸ್​ ಫಾರ್ವರ್ಡರ್​ ಎಂಬ ಆಯಪ್​ ಡೌನ್​ಲೋಡ್​ ಮಾಡುವಂತೆ ಹೇಳಿದ್ದಾರೆ. ಅಲ್ಲದೇ ಇಲ್ಲಿ ಅವರ ಬ್ಯಾಂಕ್​ ವಿವರವನ್ನು ಪಡೆದುಕೊಂಡಿದ್ದಾರೆ. ಕೂಡಲೇ ಹಣ ಡೆಬಿಟ್​ ಆಗಿರುವುದು ಗಮನಕ್ಕೆ ಬಂದ ಬಳಿಕ ಕಾರ್ಡ್ ಬ್ಲಾಕ್ ಮಾಡಿದ ಅವರು ಪೊಲೀಸರನ್ನು ಭೇಟಿಯಾಗಿದ್ದಾರೆ.

See also  ಅಭಿವೃದ್ಧಿ ಕೆಲಸಗಳಿಗೆ ರಾಜಕೀಯದ ಹಂಗಿಲ್ಲ; ಕೇಂದ್ರ ಸಚಿವ ನಿತಿನ್‌ ಗಡ್ಕರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು