News Kannada
Monday, November 28 2022

ಮಹಾರಾಷ್ಟ್ರ

22 ಬೀದಿನಾಯಿಗಳೊಂದಿಗೆ 11 ವರ್ಷದ ಮಗುವನ್ನು 2 ವರ್ಷ ಕೂಡಿಹಾಕಿದ್ದ ಪೋಷಕರು - 1 min read

Photo Credit :

ಪುಣೆ: ಬರೋಬ್ಬರಿ 22 ಬೀದಿ ನಾಯಿಗಳೊಂದಿಗೆ 11 ವರ್ಷದ ಮಗನನ್ನು ಕೂಡಿ ಹಾಕಿದ ಆರೋಪದ ಮೇಲೆ ದಂಪತಿ ವಿರುದ್ಧ ಪುಣೆಯ ಕೊಂಡ್ವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊಂಡ್ವಾದ ಸ್ಥಳೀಯರೊಬ್ಬರು ಬಾಲಕನ ಶೋಚನೀಯ ಸ್ಥಿತಿಯನ್ನು ಗಮನಿಸಿ ಮಕ್ಕಳಿಗಾಗಿ ತುರ್ತು ಸೇವೆಗಳನ್ನು ಒದಗಿಸುವ ಎನ್‌ಜಿಒ ಜ್ಞಾನ್ ದೇವಿ ಚೈಲ್ಡ್‌ಲೈನ್‌ನ ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಿದ ನಂತರ ವಿಷಯವು ಬೆಳಕಿಗೆ ಬಂದಿದೆ.

ಎರಡು ವರ್ಷಗಳ ಕಾಲ ನಾಯಿಗಳೊಂದಿಗೆ ವಾಸಿಸುತ್ತಿದ್ದ ಹುಡುಗ ನಾಯಿಗಳಂತೆ ವರ್ತಿಸಲು ಪ್ರಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜ್ಞಾನ್ ದೇವಿ ಚೈಲ್ಡ್‌ಲೈನ್‌ನ ಅನುರಾಧಾ ಸಹಸ್ರಬುದ್ಧೆ ಮಾತನಾಡಿ, ಬಾಲಕನನ್ನು ಕೊಂಡ್ವಾದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯರು ನಮಗೆ ತಿಳಿಸಿದ್ದರು. ಫ್ಲಾಟ್‌ನ ಕಿಟಕಿಯ ಬಳಿ ಹುಡುಗನನ್ನು ನೋಡಿದ ಜನರು, ಬಾಲಕನನ್ನು ಕೂಡಿ ಹಾಕಲಾಗಿದೆ. ಆತ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ ಎಂದು ಹೇಳಿದ್ದರು. ಮಾಹಿತಿಯ ನಂತರ, ಎನ್‌ಜಿಒದ ಸಾಮಾಜಿಕ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು ಮತ್ತು ಹೊರಗಿನಿಂದ ಅಪಾರ್ಟ್ ಮೆಂಟ್ ಅನ್ನು ನೋಡಿದರು. ಹುಡುಗನನ್ನು ಕೂಡಿ ಹಾಕಿದ ಕೊಠಡಿಯಲ್ಲಿ ಬರೋಬ್ಬರಿ 22 ನಾಯಿಗಳು ಇದ್ದವು. ಅಲ್ಲಿ ನಾಯಿಗಳ ಶವಗಳೂ ಸಿಕ್ಕಿವೆ ಎಂದು ಸಹಸ್ರಬುದ್ಧೆ ಹೇಳಿದ್ದಾರೆ. ಎನ್ ಜಿಒ ಸದಸ್ಯರು ಬಾಲಕನನ್ನು ರಕ್ಷಣೆ ಮಾಡಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗನನ್ನು ಅಮಾನವೀಯವಾಗಿ ಕೂಡಿ ಹಾಕಲು ಕಾರಣವೇನು ಎಂಬುವುದು ಇನ್ನು ತಿಳಿದು ಬಂದಿಲ್ಲ

See also  ಹೆಚ್ಐವಿ ಸೋಂಕಿತನ ರಕ್ತ ನೀಡಿ ಮಗು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು