ಮುಂಬೈ(ಮಹಾರಾಷ್ಟ್ರ): ಮಾಹಿಮ್ ಮತ್ತು ಮಾಟುಂಗಾ ರೈಲು ನಿಲ್ದಾಣದ ನಡುವಿನ ಹಳಿಯಲ್ಲಿ ಬಿದ್ದಿದ್ದ ಗೋಣಿಚೀಲದಲ್ಲಿ 20 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮಾಹಿತಿ ಪಡೆದ ಮುಂಬೈ ಕೇಂದ್ರ ಸರ್ಕಾರದ ರೈಲ್ವೆ ಪೊಲೀಸರು (ಜಿಆರ್ಪಿ) ಸ್ಥಳಕ್ಕಾಗಮಿಸಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಜಿಆರ್ಪಿ ಅಧಿಕಾರಿಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 9.30 ರ ಸುಮಾರಿಗೆ ರೈಲ್ವೆ ನೌಕರರು ಹಳಿಗಳ ಮೇಲೆ ನಿರ್ವಹಣಾ ಕೆಲಸ ಮಾಡುತ್ತಿದ್ದಾಗ, ಎರಡು ಹಳಿಗಳ ನಡುವೆ ಬಿಳಿ ಬಣ್ಣದ ಗೋಣಿಚೀಲವನ್ನು ಬಿಸಾಡಿರುವುದನ್ನು ಅವರು ಗಮನಿಸಿದರು. ಅದೇನೆಂದು ಪರಿಶೀಲಿಸಿದಾಗ, ಅದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದರು.
4.5 ಅಡಿ ಎತ್ತರದ ಈ ಮೃತ ಮಹಿಳೆಯ ಮೃತದೇಹವನ್ನು ಸ್ಕ್ಯಾನ್ ಮಾಡಿದಾಗ ಆಕೆಯ ಕುರ್ತಾದಲ್ಲಿ 200ರೂ. ನೋಟು ಮಾತ್ರ ಪತ್ತೆಯಾಗಿದೆ. ಈಕೆ ಮಂಗಳಸೂತ್ರವನ್ನು ಸಹ ಧರಿಸಿದ್ದು, ಆಕೆಯ ಗಂಟಲು ಮತ್ತು ಹೊಟ್ಟೆ ಭಾಗದಲ್ಲಿ ಇರಿತದ ಗಾಯಗಳಿವೆ ಎಂದು GRP ಅಧಿಕಾರಿ ಇಳಿಸಿದ್ದಾರೆ.
ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಿವೈಎಲ್ ನಾಯರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದ್ರೆ, ಇನ್ನೂ ಮೃತರ ಗುರುತು ಪತ್ತೆಯಾಗಿಲ್ಲ.