News Kannada
Saturday, October 08 2022

ಮಹಾರಾಷ್ಟ್ರ

ನಿದ್ರಾಹೀನತೆ ಹಿನ್ನೆಲೆ ಗಾಂಜಾ ಸೇವಿಸುತ್ತಿದ್ದೆ: ಆರ್ಯನ್ ಖಾನ್! - 1 min read

Photo Credit :

ಬಾಲಿವುಡ್ : ಡ್ರಗ್ಸ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಅಮೆರಿಕಾದಲ್ಲಿ ಪದವಿ ಪಡೆಯುತ್ತಿದ್ದಾಗ ಗಾಂಜಾ ಸೇವಿಸುತ್ತಿದ್ದರು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಹಿತಿ ನೀಡಿದೆ.

ಈ ಕುರಿತು ಚಾರ್ಜ್‌ಶೀಟ್​ನಲ್ಲಿ ಉಲ್ಲೇಖವಾಗಿದ್ದು, ನಿದ್ರಾಹೀನತೆ ಹಿನ್ನೆಲೆ ಇದನ್ನು ಬಳಕೆ ಮಾಡುತ್ತಿದ್ದರು ಎಂದು ಏಜೆನ್ಸಿ ಹೇಳಿದೆ.

ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿ 20 ಜನರಲ್ಲಿ 14 ಜನರ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಎನ್‌ಸಿಬಿ ಕಳೆದ ಅಕ್ಟೋಬರ್​​ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಅವರಲ್ಲಿ ಆರ್ಯನ್ ಖಾನ್ ಸೇರಿದಂತೆ ಆರು ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಮುಕ್ತಿಗೊಳಿಸಲಾಗಿದೆ.

ಎನ್‌ಸಿಬಿ ಮುಂದೆ ನೀಡಿದ ಹೇಳಿಕೆಯಲ್ಲಿ ಆರ್ಯನ್ ಖಾನ್, 2018ರಲ್ಲಿ ಅಮೆರಿಕಾದಲ್ಲಿ ಪದವಿ ಪಡೆಯುತ್ತಿದ್ದಾಗ ಗಾಂಜಾವನ್ನು ಬಳಕೆ ಮಾಡುತ್ತಿದ್ದೆ. ಆ ಸಮಯದಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದ ಪರಿಣಾಮ ಅಂತರ್ಜಾಲದಲ್ಲಿ ಲೇಖನಗಳನ್ನು ಓದಿ ಈ ಚಟಕ್ಕೆ ಬಿದ್ದಿದ್ದೆ ಎಂದು ಸ್ವತಃ ಅಧಿಕಾರಿಗಳ ಮುಂದೆ ಖಾನ್​ ಹೇಳಿದ್ದಾರೆ.

ಇನ್ನು ಮಾದಕ ವಸ್ತು ಸಂಬಂಧ ವಾಟ್ಸ್‌ಆ್ಯಪ್​ ಮಾಡಲಾದ ಸಂದೇಶ ಖಾನ್​ ಒಪ್ಪಿಕೊಂಡಿದ್ದು, ಬಾಂದ್ರಾದಲ್ಲಿ (ಮುಂಬೈ) ಒಬ್ಬ ಡೀಲರ್ ಬಗ್ಗೆ ಖಾನ್​ ಹೇಳಿದ್ದು, ಆತನ ಹೆಸರು ಹಾಗೂ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಆ ಡೀಲರ್​ ಸಹ ಆರೋಪಿ ಆಗಿರುವ ಆಚಿತ್​​ಗೆ ಗೊತ್ತಿದ್ದಾನೆ ಎಂದೂ ಸಹ ಹೇಳಿದ್ದಾನೆ.

ಆರ್ಯನ್ ಖಾನ್ ಅವರ ಮೊಬೈಲ್ ಫೋನ್​ನಲ್ಲಿ ಕಂಡು ಬಂದ ಚಾಟ್‌ಗಳು ಪ್ರಸ್ತುತ ಪ್ರಕರಣದಲ್ಲಿ ಅವರಿಗೆ ಸಂಪರ್ಕ ಹೊಂದಿಲ್. ಆರ್ಯನ್ ಖಾನ್ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ರಿಕವರಿ ಮಾಡಲಾದ ವಸ್ತುಗಳಲ್ಲಿ ಡ್ರಗ್ಸ್ ಕಂಡು ಬಂದಿಲ್ಲ ಎಂದು ಚಾರ್ಜ್​ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ನಟಿ ಅನನ್ಯಾ ಪಾಂಡೆ ಅವರೊಂದಿಗಿನ ಚಾಟ್ ಸಂಭಾಷಣೆಯನ್ನು ಸಹ ಆರ್ಯನ್ ಖಾನ್ ಒಪ್ಪಿದ್ದಾರೆ. ಅದರಂತೆ ಇದು ತಮಾಷೆಯಾಗಿ ಮಾಡಲಾದ ಸಂದೇಶ ಎಂದು ಚಾರ್ಜ್​ಶೀಟ್​ನಲ್ಲಿ ಬರೆಯಲಾಗಿದೆ.

ಆರ್ಯನ್ ಖಾನ್ ಅನನ್ಯ ಪಾಂಡೆ ಹೆಸರು ಹೇಳಿದ್ದ ಆಧಾರದ ಮೇಲೆ ಕಳೆದ ವರ್ಷ ಅಕ್ಟೋಬರ್ 21ರಂದು ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.ಆಕೆಯ ಮನೆಯನ್ನು ಶೋಧಿಸಿದಾಗ ಯಾವುದೇ ಅಕ್ರಮ ಕಳ್ಳಸಾಗಣೆ ಕಂಡು ಬಂದಿಲ್ಲ. ಜೊತೆಗೆ ಕೆಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್‌ಶೀಟ್ ಮೂಲಕ ತಿಳಿಸಲಾಗಿದೆ.

See also  ಸಾರಿಗೆ ಬಸ್ ಗೆ ಕಪ್ಪು ಮಸಿ ಬಳಿದು ಎಂಇಎಸ್ ಕಾರ್ಯಕರ್ತರ ಪುಂಡಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು