ಮಹಾರಾಷ್ಟ್ರ: ಶಿವಸೇನಾ ಅಧ್ಯಕ್ಷ , ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಪಕ್ಷದ ಮುಖವಾಣಿಗಳಾದ ‘ಸಾಮ್ನಾ’ ಮತ್ತು ‘ದೊಪಹರ್ ಕ ಸಾಮ್ನಾ’ ಪತ್ರಿಕೆಗಳ ಸಂಪಾದಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
‘ಸಾಮ್ನಾ’ ಮರಾಠಿ ದೈನಿಕವಾಗಿದ್ದರೆ, ‘ದೊಪಹರ್ ಕ ಸಾಮ್ನಾ’ ಹಿಂದಿಯ ಟಾಬ್ಲಾಯ್ಡ್ ಆಗಿದೆ. ಉಭಯ ಪತ್ರಿಕೆಗಳ ಇನ್‌ಪ್ರಿಂಟ್‌ನಲ್ಲಿ ಸಂಪಾದಕರು ಎಂದು ಉದ್ಧವ್ ಹೆಸರಿದೆ.
ಈ ಹಿಂದೆ ಸಂಪಾದಕರಾಗಿದ್ದ ಠಾಕ್ರೆ , ಮುಖ್ಯಮಂತ್ರಿಯಾದ ಬಳಿಕ ಆ ಹೊಣೆಯನ್ನು ಪತ್ನಿ ರಶ್ಮಿ ಅವರಿಗೆ ವಹಿಸಿದ್ದರು. ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ ಸದ್ಯ ಬಂಧಿಸಿದೆ. ಹೀಗಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.