ಮುಂಬೈ: ಕಾಂಕ್ರೀಟ್ ಕಾಡು ಎಂದೇ ಗುರುತಿಸಿಕೊಂಡಿರುವ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಸತತ ಎರಡನೇ ವರ್ಷವೂ ವರ್ಲ್ಡ್ ಟ್ರೀ ಸಿಟಿ 2022 ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಬಿಎಂಸಿ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಆರ್ಬರ್ ಡೇ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಡಾನ್ ಲ್ಯಾಂಬೆ ಪ್ರಮಾಣಪತ್ರವನ್ನು ಬಿಎಂಸಿ ಅಧಿಕಾರಿಗಳಿಗೆ ನೀಡಿದ್ದಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಪರಿಸರ ವಿಭಾಗ ವಿಶ್ವಾದ್ಯಂತ 35 ಕೋಟಿಗೂ ಅಧಿಕ ಮರಗಳನ್ನು ನೆಟ್ಟಿದ್ದು, 2027ರವೇಳೆಗೆ 50 ಕೋಟಿ ಮರಗಳನ್ನು ಬೆಳೆಸುವ ಗುರಿ ಹೊಂದಿದೆ.
ಮುಂಬೈ ಮಹಾನಗರ ಪಾಲಿಕೆಯು ನಗರ ಅರಣ್ಯ ನಿರ್ಮಾಣ, ಮರ ನಿರ್ಹಣೆ ಮೊದಲಾದ ಐದು ಮಾನದಂಡಗಳನ್ನು ಪೂರೈಸಿದ ಕಾರಣ ವಿಶ್ವಸಂಸ್ಥೆ ಮೂಲಕ ಈ ಪ್ರಶಸ್ತಿ ನೀಡಲಾಗಿದೆ.
2021ರಲ್ಲಿ ಹೈದ್ರಾಬಾದ್ ಮತ್ತು ಮುಂಬೈಗೆ ಈ ಪುರಸ್ಕಾರ ದೊರೆತಿದ್ದು ಎರಡನೇ ಬಾರಿಗೆ ಮುಂಬೈಗೆ ಈ ಪ್ರಶಸ್ತಿ ದೊರೆತಿದೆ.
ಈ ಕುರಿತು ಮಾತನಾಡಿರುವ ಬಿಎಂಸಿ ಕಮಿಷನರ್ ಐ.ಎಸ್.ಚಹಲ್ ‘‘ಮುಂಬೈನಲ್ಲಿ ಮರಗಳ ನಿರ್ವಹಣೆ, ಹೊಸ ಗಿಡ ನಾಟಿ ಪ್ರಯತ್ನ, , ನಗರ ಅರಣ್ಯಗಳ ವ್ಯಾಪಕ ಅನುಷ್ಠಾನದಂತಹ ಪ್ರಯತ್ನಗಳಿಂದಾಗಿ ಈ ಪ್ರಶಸ್ತಿ ದೊರೆತಿದ್ದು, ವಿಶ್ವಪಟ್ಟಿಯಲ್ಲಿ ನಮ್ಮ ನಗರ ಸ್ಥಾನ ಪಡೆದಿರುವುದು ಹೆಮ್ಮೆ ಎಂದು ತಿಳಿಸಿದ್ದಾರೆ.