ಮುಂಬೈ: ವಿನಾಯಕ ಡಿ. ಸಾವರ್ಕರ್ ಅವರ ಜನ್ಮದಿನವಾದ ಮೇ 28 ಅನ್ನು ರಾಜ್ಯಾದ್ಯಂತ ‘ಸ್ವಾತಂತ್ರ್ಯವೀರ್ ಗೌರವ ದಿನ’ ಎಂದು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ಹೇಳಿದ್ದಾರೆ.
ವಿನಾಯಕ್ ಡಿ. ಸಾವರ್ಕರ್ ಅವರು ಮೇ 28, 1883 ರಂದು ನಾಸಿಕ್‌ನ ಭಾಗೂರ್‌ನಲ್ಲಿ ಜನಿಸಿದ್ದರು. ಮುಂದಿನ ತಿಂಗಳು ಅವರ 140ನೇ ಜನ್ಮ ದಿನಾಚರಣೆ ನಡೆಯಲಿದೆ. ಈ ಮಹತ್ವದ ಸಂದರ್ಭವನ್ನು ಸ್ಮರಿಸಲು, ಭಾರತದ ಸ್ವಾತಂತ್ರ್ಯ ಚಳವಳಿಗೆ ಸಾವರ್ಕರ್ ಅವರ ಕೊಡುಗೆ ಎತ್ತಿ ಹಿಡಿಯಲು, ಅವರ ಸಿದ್ಧಾಂತ ಪ್ರಚಾರ, ಸಾಮಾಜಿಕ ಸುಧಾರಣೆ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಅವರ ಪ್ರಯತ್ನಗಳನ್ನು ನೆನಪಿಸಲು ಸರಣಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಿಂಧೆ ಹೇಳಿದ್ದಾರೆ. ಈ ನಡುವೆ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಶಿವಸೇನೆ ಒತ್ತಾಯಿಸಿದೆ.