News Kannada
Saturday, April 01 2023

ಒಡಿಸ್ಸಾ

ಏಳು ರಾಜ್ಯಗಳ 14 ಮಂದಿ ಮಹಿಳೆಯರನ್ನು ಮದುವೆಯಾಗಿದ್ದ ವಂಚಕ ಬಂಧನ

Photo Credit : IANS

ತನ್ನನ್ನು ತಾನು ವೈದ್ಯ ಎಂದು ಹೇಳಿಕೊಂಡಿದ್ದ ವಂಚಕನೊಬ್ಬ ಏಳು ರಾಜ್ಯಗಳ 14 ಮಂದಿ ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ದೋಚಿದ್ದು ಈತನನ್ನು ಓಡಿಶಾದ ಭುವನೇಶ್ವರದ ಖಂಡಗಿರಿಯಲ್ಲಿ ಏಳನೇ ಪತ್ನಿಯು ನೀಡಿದ ದೂರನ್ನು ಆಧರಿಸಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರಮೇಶ್​ ವೈದ್ಯನೂ ಅಲ್ಲ ಹಾಗೂ ಸರ್ಕಾರಿ ಅಧಿಕಾರಿಯೂ ಅಲ್ಲ. ಆದರೆ ಈತ ತನ್ನ ವಾಹನದ ಮೇಲೆ ಸರ್ಕಾರಿ ಸಿಬ್ಬಂದಿ ಎಂಬ ಸ್ಟಿಕ್ಕರ್​ ಅಂಟಿಸಿಕೊಂಡಿದ್ದ ಎನ್ನಲಾಗಿದೆ. ಐಷಾರಾಮಿ ಫ್ಲ್ಯಾಟ್​ಗಳಲ್ಲಿ ವಾಸಿಸುತ್ತಿದ್ದ ಈತ ರಾಜ್ಯಾದ್ಯಂತ ಪ್ರಯಾಣ ಬೆಳೆಸುತ್ತಿದ್ದ ಎನ್ನಲಾಗಿದೆ.

ವಂಚಕ ರಮೇಶ್​ ಮೊಟ್ಟ ಮೊದಲ ಬಾರಿಗೆ 1982ರಲ್ಲಿ ಕೇಂದ್ರಪಾರಾದಲ್ಲಿ ವಿವಾಹವಾಗಿದ್ದನು. ಇದಾದ ಬಳಿಕ 2002ರಲ್ಲಿ ಎರಡನೇ ವಿವಾಹವಾಗಿದ್ದಾನೆ. ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ವೈದ್ಯ ಅಥವಾ ಸರ್ಕಾರಿ ಅಧಿಕಾರಿ ಎಂದು ಹಾಕಿಕೊಂಡಿದ್ದ. ಅಲ್ಲದೇ ಅವಿವಾಹಿತ ಎಂದೂ ಬರೆದುಕೊಂಡಿದ್ದ ಎನ್ನಲಾಗಿದೆ. ಶ್ರೀಮಂತ ಕುಟುಂಬದ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ ಈತ ವಿವಾಹವಾದ ಬಳಿಕ ಅವರ ಬಳಿ ಇದ್ದ ಲಕ್ಷಾಂತರ ಹಣವನ್ನು ದೋಚಿ ಎಸ್ಕೇಪ್​ ಆಗುತ್ತಿದ್ದ ಎನ್ನಲಾಗಿದೆ.

ರಮೇಶ್​ ಓಡಿಶಾದಲ್ಲಿ ಮೂವರು, ಪಂಜಾಬ್​ನಲ್ಲಿ ಒಬ್ಬರು, ಜಾರ್ಖಂಡ್​​, ಆಂಧ್ರಪ್ರದೇಶ ಹಾಗೂ ಚತ್ತೀಸಗಢದಲ್ಲಿ ತಲಾ ಒಂದು ಮದುವೆಯಾಗಿದ್ದಾನೆ. ಇದರ ಜೊತೆಯಲ್ಲಿ ದೆಹಲಿಯಲ್ಲಿ ಹಾಗೂ ಮಧ್ಯಪ್ರದೇಶದಲ್ಲಿಯೂ ತಲಾ ಇಬ್ಬರನ್ನು ವಿವಾಹವಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ರಮೇಶ್​ 7ನೇ ಪತ್ನಿ ಖಂಡಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾವು ಮ್ಯಾಟ್ರಿಮೋನಿ ವೆಬ್​ಸೈಟ್​ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದೆವು. ನಮ್ಮ ವಿವಾಹದ ಬಳಿಕ ನಾವು ಭುವನೇಶ್ವರದಲ್ಲಿ ವಾಸವಿದ್ದೆವು. ಸ್ವಲ್ಪ ದಿನದ ಬಳಿಕ ಈ ವ್ಯಕ್ತಿಯು ನನ್ನ ಚಿನ್ನ ಹಾಗೂ ಹಣದೊಂದಿಗೆ ಎಸ್ಕೇಪ್​ ಆಗಿದ್ದ, ಇದಾದ ಬಳಿಕ ಈತ ವೆಬ್​ಸೈಟ್​ನಲ್ಲಿ ಮತ್ತೆ ಮದುವೆಯಾಗಲು ಫೋಟೋ ಅಳವಡಿಸಿದ್ದು ನನ್ನ ಗಮನಕ್ಕೆ ಬಂತು. ಹೀಗಾಗಿ ನಾನು ಎಫ್​ಐಆರ್​ ದಾಖಲಿಸಿದೆ ಎಂದು ಏಳನೇ ಪತ್ನಿ ಹೇಳಿದ್ದಾರೆ.

See also  ವಿಗ್ ಧರಿಸಿದ ವರನನ್ನು ಮದುವೆ ಮಂಟಪದಲ್ಲೇ ನಿರಾಕರಿಸಿದ ವಧು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು