News Kannada
Sunday, September 25 2022

ಒಡಿಸ್ಸಾ

ಪುರಿ ಜಗನ್ನಾಥ ದೇಗುಲಕ್ಕೆ ನುಗ್ಗಿ 43 ಒಲೆಗಳ ಧ್ವಂಸ; ಆರೋಪಿ ಬಂಧನ - 1 min read

Photo Credit :

ಒರಿಸ್ಸಾದ ಪುರಾಣಪ್ರಸಿದ್ದ ಪುರಿ ಜಗನ್ನಾಥ ದೇವಾಲಯದ ಅಡುಗೆ ಕೋಣೆಯಲ್ಲಿ ಮಣ್ಣಿನ ಒಲೆಗಳನ್ನು ಧ್ವಂಸ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಖೋರ್ಧಾ ಜಿಲ್ಲೆಯ ಬೆಗುನಿಯಾ ಗ್ರಾಮದ ಜೈ ಮೊಹಪಾತ್ರ(30 ವರ್ಷ) ಎಂದು ಗುರುತಿಸಲಾಗಿದೆ. ಪುರಿ ಪೊಲೀಸರ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿತ್ತು.

ದೇಶದಲ್ಲೇ ದೊಡ್ಡ ದೇವಾಲಯಗಳಲ್ಲೊಂದಾಗಿರುವ ಪುರಿ ದೇವಸ್ಥಾನದ ಅಡುಗೆಮನೆಯಲ್ಲಿ ಒಟ್ಟು 240 ಮಣ್ಣಿನ ಒಲೆಗಳಿವೆ. ದೇವರಿಗೆ ಮತ್ತು ಭಕ್ತರಿಗೆ ಅರ್ಪಿಸುವ ‘ಮಹಾಪ್ರಸಾದ’ವನ್ನು ತಯಾರಿಸಲು ಒಲೆಗಳನ್ನು ಬಳಸಲಾಗುತ್ತದೆ. ಶನಿವಾರ ರಾತ್ರಿ ದೇಗುಲದೊಳಗೆ ನುಗ್ಗಿದ್ದ ಆರೋಪಿ 43 ಒಲೆಗಳನ್ನು ಧ್ವಂಸಗೈದಿದ್ದ.

ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 427 ಮತ್ತು 295A (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಯ ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

See also  ಡಿ ಆರ್ ಡಿ ಒ ಬೇಹುಗಾರಿಕೆ ಹನಿ ಟ್ರ್ಯಾಪ್ ಲಿಂಕ್ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು