News Kannada
Thursday, October 06 2022

ಒಡಿಸ್ಸಾ

ಒಡಿಶಾ: ವಾಮಾಚಾರ ನಡೆಸುತ್ತಿರುವ ಶಂಕೆ ಮೇಲೆ ವೃದ್ಧೆ ಕೊಲೆ - 1 min read

Chikkaballapur: Brother kills youth for molesting sister
Photo Credit : Pexels

ಬಾರಿಪಾದ: ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ವೃದ್ಧೆಯೊಬ್ಬರನ್ನು ವಾಮಾಚಾರ ನಡೆಸುತ್ತಿರುವ ಶಂಕೆ ಮೇಲೆ ವ್ಯಕ್ತಿಯೊಬ್ಬರು  ಕೊಲೆ ಮಾಡಿದ್ದಾರೆ.

ಮೃತರನ್ನು ಗಂಗಿ ಜಮುದಾ (70) ಎಂದು ಗುರುತಿಸಲಾಗಿದೆ. ಇವರು ಒಡಿಶಾದ ಮಯೂರ್‌ ಭಂಜ್‌ ಜಿಲ್ಲೆಯ ಬಾದಾಮ್‌ತೊಲಿಯಾ ಗ್ರಾಮದವರು. ‘ಇದೇ ಗ್ರಾಮದ ಮದನ್‌ ಪಿಂಗುವಾ (60) ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ’ ಎಂದು ಜಮ್ದಾ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ತಮ್ಮ ಕುಟುಂಬದವರ ಮೇಲೆ ವಾಮಾಚಾರ ನಡೆಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಆರೋಪಿಯು ಶನಿವಾರ ರಾತ್ರಿ ಜಮುದಾ ಅವರನ್ನು ಲಾಠಿಯಿಂದ ಥಳಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ.

ಮದನ್‌ ಜೊತೆ ಕಮಲಾಕಾಂತ್‌ ದಾಸ್‌ ಎಂಬಾತನನ್ನೂ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

See also  ನವದೆಹಲಿ: ನೇಪಾಳದ ಮಾಜಿ ಪ್ರಧಾನಿ ಪ್ರಚಂಡ ಅವರನ್ನು ಭೇಟಿಯಾದ ಜೆ.ಪಿ. ನಡ್ಡಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು