News Karnataka Kannada
Friday, April 19 2024
Cricket
ಒಡಿಸ್ಸಾ

ಒಡಿಶಾದಲ್ಲಿ ಭೀಕರ ರೈಲು ಅಪಘಾತ : ಕನಿಷ್ಠ 233 ಸಾವು, 900ಕ್ಕೂ ಅಧಿಕ ಮಂದಿಗೆ ಗಾಯ

Terrible train accident in Odisha: At least 233 dead, more than 900 injured
Photo Credit :

ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ ರೈಲು, ಶಾಲಿಮಾರ್‌-ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌, ಗೂಡ್ಸ್‌ ರೈಲು ಪರಸ್ಪರ ಡಿಕ್ಕಿ

ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 233 ಮಂದಿ ಸಾವಿಗೀಡಾಗಿ 900ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಭೀಕರ ರೈಲು ಅಪಘಾತ ಇದಾಗಿದ್ದು, ಇಡೀ ದೇಶವನ್ನು ಆಘಾತಕ್ಕೊಳಪಡಿಸಿದೆ.
ಎರಡು ಪ್ಯಾಸೆಂಜರ್‌ ರೈಲು ಮತ್ತು ಒಂದು ಗೂಡ್ಸ್‌ ರೈಲು ಅಪಘಾತದಲ್ಲಿ ಒಳಗೊಂಡಿವೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ ರೈಲು, ಶಾಲಿಮಾರ್-ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಒಂದು ಗೂಡ್ಸ್‌ ರೈಲು ಪರಸ್ಪರ ಡಿಕ್ಕಿ ಹೊಡೆದಿವೆ.

ಅಪಘಾತ ಹೇಗೆ ಸಂಭವಿಸಿತು?: ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ ರೈಲು ಬಹನಾಗ ನಿಲ್ದಾಣದ ಸಮೀಪ ಹಳಿತಪ್ಪಿ ಅದರ ಹಲವು ಬೋಗಿಗಳು ಪಕ್ಕದ ಹಳಿ ಮೇಲೆ ಬಿದ್ದಿವೆ. ಇದೇ ವೇಳೆ ಶಾಲಿಮಾರ್‌-ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಪಕ್ಕದ ಹಳಿಯಲ್ಲಿ ಬಂದಿದ್ದು, ಹಳಿ ಮೇಲಿದ್ದ ಸೂಪರ್‌ಫಾಸ್ಟ್‌ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಲೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ಕೆಲವು ಬೋಗಿಗಳಿಗೆ ಬೆಂಕಿಹತ್ತಿಕೊಂಡಿದೆ. ಈ ರೈಲಿನ ಬೋಗಿಗಳು ಹಳಿ ತಪ್ಪಿ ಇನ್ನೊಂದು ಹಳಿಯಲ್ಲಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿವೆ. ಹೀಗೆ ಮೂರು ರೈಲುಗಳು ಏಕಕಾಲದಲ್ಲಿ ಅಪಘಾತಕ್ಕೀಡಾದ ಪರಿಣಾಮ ಸಾವುನೋವಿನ ಸಂಖ್ಯೆ ಬಹಳ ಹೆಚ್ಚಾಗಿದೆ.

ಸಮರೋಪಾದಿ ಪರಿಹಾರ ಕಾರ್ಯಾಚರಣೆ: ಬಾಲಾಸೋರ್‌ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಸಮೀಪ ಅಪಘಾತ ಸಂಭವಿಸಿದ್ದು, ರಾತ್ರಿಯಿಂದಲೇ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಹತ್ತಾರ ಬೋಗಿಗಳು ನುಜ್ಜುಗುಜ್ಜಾಗಿರುವುದರಿಂದ ಒಳಗೆ ಇನ್ನೂ ಅನೇಕ ಪ್ರಯಾಣಿಕರು ಸಿಲುಕಿರುವ ಸಾಧ್ಯತೆಯಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ರೈಲ್ವೇ ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ.
ಒಡಿಶಾ ವಿಕೋಪ ನಿರ್ವಹಣೆ ಪಡೆಯ ನಾಲ್ಕು ತಂಡ, ರಾಷ್ಟ್ರೀಯ ವಿಕೋಪ ನಿರ್ವಹಣೆ ಪಡೆಯ ಮೂರು ಘಟಕ, ಪೊಲೀಸರು, ರೈಲ್ವೇ ಅಧಿಕಾರಿಗಳು ಮತ್ತು ಸ್ಥಳೀಯರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. 60ಕ್ಕೂ ಅಧಿಕ ಆಂಬುಲೆನ್ಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಪಶ್ಚಿಮ ಬಂದಾಳ ಸರಕಾರವೂ ಒಂದು ರಕ್ಷಣಾ ತಂಡವನ್ನು ರವಾನಿಸಿದೆ.
ಅಪಘಾತ ದುದ್ದಿ ತಿಳಿದ ಕೂಡಲೇ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಟ್ವೀಟ್‌ ಮಾಡಿ ಶೋಕ ವ್ಯಕ್ತಪಡಿಸಿ ಕೇಂದ್ರ ಸರಕಾರ ರಕ್ಷಣಾ ಕಾರ್ಯಕ್ಕೆ ಸರ್ವ ಶ್ರಮವನ್ನೂ ಹಾಕಲಿದೆ ಎಂದು ಹೇಳಿದ್ದಾರೆ. ಒಡಿಶಾ ಸರಕಾರ ಶನಿವಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅಪಘಾತ ಸ್ಥಳಕ್ಕೆ ಧಾವಿಸಿದ್ದಾರೆ.

10 ಲ.ರೂ. ಪರಿಹಾರ: ಮೃತರ ಕುಟುಂಬಗಳಿಗೆ ತಲಾ 10 ಲ.ರೂ., ಗಾಯಾಳುಗಳಿಗೆ ತಲಾ 2 ಲ.ರೂ., ಚಿಕ್ಕಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಅಶ್ವಿನಿ ವೈಷ್ಣವ್‌ ಪ್ರಕಟಿಸಿದ್ದಾರೆ.

ಮೋದಿ, ಮಮತಾ ಸಂತಾಪ: ರೈಲು ಅಪಘಾತದಲ್ಲಿ ಮರತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಖುದ್ದು ಮಾಹಿತಿ ಪಡೆಯುತ್ತಿದ್ದೇವೆ ಎಂದು ಉಭಯ ನಾಯಕರು ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಸಹಾಯವಾಣಿ ಸಂಖ್ಯೆ: 033-26382217, 8972073925, 67822 62286, 9332392339.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು