ನವದೆಹಲಿ: ವಿಶ್ವದಲ್ಲಿಯೇ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದೇವೆ. ರಫ್ತಿನಲ್ಲಿ ಸಹ ಭಾರತ ದಾಖಲೆ ಮಾಡಿದೆ. ಭಾರತದ ಯುವಕರಿಗೆ ಭ್ರಷ್ಟಾಚಾರ ರಹಿತ ಸರ್ಕಾರ ಕೊಟ್ಟಿದ್ದೇವೆ. ಆದರೆ ಕೆಲವರು ನಮ್ಮ ಪ್ರಯತ್ನಕ್ಕೆ ಅಡ್ಡಿಗಾಲು ಹಾಕುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ವಿವರಿಸಿದರು.
ಇನ್ನು 2024 ರ ಚುನಾವಣೆಯಲ್ಲಿ ಜನಾಶೀರ್ವಾದದೊಂದಿಗೆ ಎನ್‌ಡಿಎ ಮತ್ತು ಬಿಜೆಪಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಭವ್ಯ ವಿಜಯದೊಂದಿಗೆ ಮರಳಿ ಬರಲಿದೆ. ಪ್ರತಿಪಕ್ಷಗಳ ಅವಿಶ್ವಾಸವು ನಮಗೆ ಅದೃಷ್ಟ. 2024ರಲ್ಲಿ ಎನ್‌ಡಿಎ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಫಿಲ್ಡಿಂಗ್‌ನಲ್ಲಿ ನೀವೆ ಇದ್ದು, ನೋ ಬಾಲ್ ಹಾಕಿದ್ದೀರಿ. ನಾವು ಸಿಕ್ಸ್ ಬೌಂಡರಿ ಹೊಡೆದಿದ್ದೇವೆ. ಮುಂದೆಯು ಹೊಡೆಯುತ್ತೇವೆ ಎಂದು ಪ್ರಧಾನಿ ಮೋದಿ ಅವಿಶ್ವಾಸ ಗೊತ್ತುವಳಿ ಚರ್ಚೆ ವೇಳೆ ಉತ್ತರಿಸಿದರು.
ಯುವಕರಿಗಿಂತ ವಿಪಕ್ಷಗಳಿಗೆ ತಮ್ಮ ರಾಜಕೀಯದ್ದೆ ಚಿಂತೆಯಾಗಿದೆ. ನಿಮ್ಮ ಒಂದೊಂದು ಶಬ್ದವನ್ನು ದೇಶದ ಜನರು ಆಲಿಸುತ್ತಿದ್ದಾರೆ. ಎಂತಹ ಪರಿಸ್ಥಿತಿ ನಿಮ್ಮದು? ಎಂತಹ ದಾರಿದ್ರ್ಯ ನಿಮ್ಮದು. ನಿರಾಶೆ ಎನ್ನುವುದು ಬಿಟ್ಟರೆ ನೀವು ಭಾರತೀಯರಿಗೆ ಏನೂ ಕೊಟ್ಟಿಲ್ಲ ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.