News Kannada
Monday, December 05 2022

ಪಂಜಾಬ್

ಲಸಿಕೆ ಕಡ್ಡಾಯವಾಗಿ ತೆಗೆದುಕೊಳ್ಳುವ ಸಲುವಾಗಿ ಚಂಡಿಗಢದಲ್ಲಿ ಹೊಸದಾಗಿ ನೀತಿ

Photo Credit :

ಚಂಡೀಗಢ :ವೈದ್ಯಕೀಯ ಕಾರಣಕ್ಕೆ ಕೊರೊನಾ ಲಸಿಕೆ ಪಡೆಯದ ಸಿಬ್ಬಂದಿಗಳಿಗೆ ಮಾತ್ರ ವಿನಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ತಿಳಿಸಿದ್ದು, ಇದನ್ನು ಹೊರತುಪಡಿಸಿ ಕೊರೊನಾ ಲಸಿಕೆ ಪಡೆಯದ ಸಿಬ್ಬಂದಿಗಳಿಗೆ ವಿನಾಯಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಒಂದೇ ಒಂದು ಡೋಸ್‌ ಕೊರೊನಾ ಲಸಿಕೆಯನ್ನೂ ಪಡೆಯದ ರಾಜ್ಯ ಸರಕಾರಿ ಉದ್ಯೋಗಿಗಳನ್ನು ಸೆಪ್ಟೆಂಬರ್‌ 15 ರಿಂದ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಶುಕ್ರವಾರ ಘೋಷಿಸಿದ್ದಾರೆ.

ಪಂಜಾಬ್‌ ರಾಜ್ಯದ ಜನತೆಯನ್ನು ಕೊರೊನಾ ಸಾಂಕ್ರಾಮಿಕದಿಂದ ರಕ್ಷಿಸುವ ಸಲುವಾಗಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಈ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.

ಶುಕ್ರವಾರ ನಡೆದ ಉನ್ನತ ಮಟ್ಟದ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌, ದತ್ತಾಂಶಗಳನ್ನು ಪರಿಶೀಲಿಸಿದಾಗ ಕೋವಿಡ್‌-19 ಲಸಿಕೆಯ ಕಾರ್ಯಕ್ಷಮತೆ ಋಜುವಾತಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ ಸರಕಾರಿ ಸಿಬ್ಬಂದಿಗಳಿಗೆ ಲಸಿಕೆ ಕಡ್ಡಾಯಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಸರಕಾರಿ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ತಲುಪಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗಿದೆ. ಹೀಗಿದ್ದೂ ಕೊರೊನಾ ಲಸಿಕೆ ಪಡೆಯದೆ ತಪ್ಪಿಸಿಕೊಳ್ಳುತ್ತಿರುವ ಸಿಬ್ಬಂದಿಗಳನ್ನು ಕಡ್ಡಾಯ ರಜೆ ಮೇಲೆ ಹೋಗಲು ಸೂಚಿಸಲಾಗುವುದು ಎಂದು ಅವರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ

See also  ದೇಶದಾದ್ಯಂತ 10,302 ಹೊಸ ಕೋವಿಡ್‌ ಪ್ರಕರಣ ದೃಢ, 267 ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು