ಪಂಜಾಬ್: ಗಾಯಕ, ರಾಪರ್, ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೂಸ್ ವಾಲಾ ಅವರು ಮಾನ್ಸಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.ಅವರು ಎಎಪಿಯ ಡಾ ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಪರಾಭವಗೊಂಡರು.
ಪಂಜಾಬಿನಲ್ಲಿ ಆಪ್ ಸರಕಾರ ಅಧಿಕಾರಕ್ಕೆ ಬಂದು ಹಲವಾರು ಕಾಂಗ್ರೆಸ್ ನಾಯಕತ ಸೆಕ್ಯುರಿಟಿಯನ್ನುಹಿಂಪಡೆದಿತ್ತು. ಇದರ ಬೆನ್ನಲ್ಲೇ ಹತ್ಯೆ ಮಾಡಲಾಗಿದೆ. ಸಿಧು ಜೊತೆ ಇನ್ನಿಬ್ಬರಿಗೆ ಗುಂಡೇಟು ಬಿದ್ದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆಯಷ್ಟೇ ಸಿಧು ಮೂಸ್ ವಾಲಾ ನೀಡಿದ್ದ ಸೆಕ್ಯುರಿಟಿಯನ್ನು ಹಿಂಪಡೆಯಲಾಗಿತ್ತು. ಇದಾದ ಬಳಿಕ ಇಂದು ದಾಳಿ ನಡೆದಿದ್ದು,ಪಂಜಾಬ್ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಮಾನ್ಸಾ ಜಿಲ್ಲೆಯ ಮೂಸಾ ಎಂಬ ಹಳ್ಳಿಯಿಂದ ಬಂದ ಮೂಸ್ ವಾಲಾ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಹೆಚ್ಚಿನ ಅಭಿಮಾನಿಗಳ ನಡುವೆ ಕಾಂಗ್ರೆಸ್‌ಗೆ ಸೇರಿದ್ದರು.