News Kannada
Tuesday, December 12 2023
ಪಂಜಾಬ್

ಪಂಜಾಬ್: ನಾಳೆ ಚಂಡೀಗಢದ ನಿವಾಸದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಮುಖ್ಯಮಂತ್ರಿ ಭಗವಂತ್​ ಮಾನ್!

Chandigarh Chief Minister Bhagwant Mann to tie the knot tomorrow at his residence in Chandigarh.
Photo Credit :

ಪಂಜಾಬ್ : ಮುಖ್ಯಮಂತ್ರಿ ಭಗವಂತ್​ ಮಾನ್ ನಾಳೆ ಚಂಡೀಗಢದ ತಮ್ಮ ನಿವಾಸದಲ್ಲಿ ಸಪ್ತಪದಿ ತುಳಿಯಲಿದ್ದಾರೆ.                ಡಾ. ಗುರುಪ್ರಿತ್ ಕೌರ್​ ಜೊತೆ ಖಾಸಗಿ ಸಮಾರಂಭದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ 2ನೇ ಮದುವೆಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ, ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ಭಾಗಿಯಾಗಲಿದ್ದಾರೆ.

ಭಗವಂತ್ ಮಾನ್​ ಈಗಾಗಲೇ 2015ರಲ್ಲಿ ಇಂದ್ರಪ್ರೀತ್ ಕೌರ್ ಜೊತೆ ಮದುವೆ ಮಾಡಿಕೊಂಡಿದ್ದರು. ಆದರೆ, ಆರು ವರ್ಷಗಳ ಹಿಂದೆ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ.

ಡಾ. ಗುರುಪ್ರೀತ್ ಕೌರ್​ ಎಂಬಿಬಿಎಎಸ್​​ ಪದವೀಧರೆ ಆಗಿದ್ದು, ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿದು ಬಂದಿದೆ. ಭಗವಂತ್ ಮಾನ್​​ ಅವರ ತಾಯಿ ಹಾಗೂ ಸಹೋದರಿ ಸೇರಿಕೊಂಡು ವಧುವಿನ ಆಯ್ಕೆಮಾಡಿದ್ದಾರಂತೆ.

ಆರು ವರ್ಷಗಳ ಹಿಂದೆ ಭಗವಂತ್ ಮಾನ್​ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು, ಸದ್ಯ ಅವರು ಅಮೆರಿಕಾದಲ್ಲಿ ಎರಡು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಭಗವಂತ್ ಮಾನ್​ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.

See also  ಜೈಲಿನಲ್ಲಿರುವ ವಿಐಪಿ ಕೊಠಡಿಗಳನ್ನು ಮುಚ್ಚಲಾಗುವುದು : ಪಂಜಾಬ್ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು